ಚಾಮರಾಜನಗರ: ನಾನು ಟಿಕೆಟ್ ಕೊಡದಿದ್ದರೇ ಸುಧಾಕರ್ ಈಗ ಮಂತ್ರಿ ಆಗ್ತಿದ್ರಾ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಕೊಳ್ಳೇಗಾಲ ತಾಲೂಕಿನ ಬಸ್ತಿಪುರ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
2013ರಲ್ಲಿ ನಾನು ಟಿಕೆಟ್ ಕೊಡದಿದ್ದರೇ ಅವರು ಎಂಎಲ್ಎ ಆಗ್ತಿದ್ರಾ?, ಅದಾದ ಬಳಿಕ ಹೆಚ್.ಸಿ ಮಹಾದೇವಪ್ಪ ಶಿಫಾರಸು ಮಾಡಿಸಿ ಟಿಕೆಟ್ ಪಡೆಯದಿದ್ದರೇ ಈಗ ಆತ ಮಂತ್ರಿ ಆಗ್ತಿದ್ರಾ? ಎಂದು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಹುಡುಕುತ್ತಿದ್ದಾರೆಂಬ ಆರೋಗ್ಯ ಸಚಿವ ಸುಧಾಕರ್ ಟೀಕೆಗೆ ಖಾರವಾಗಿ ಉತ್ತರಿಸಿದರು.
ಇನ್ನು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಹರಿಹಾಯ್ದ ಅವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಡ್ರಾಪ್ ಔಟ್ ಆಗುತ್ತಿದ್ದಾರೆ. ಅವರನ್ನು ಏನು ಈ ಸರ್ಕಾರ ಅವಿದ್ಯಾವಂತರನ್ನಾಗಿಸಲು ಹೊರಟಿದ್ದಾರೆಯೇ?, ಇಷ್ಟು ದಿನಗಳಾದರೂ ಪಠ್ಯ-ಪುಸ್ತಕ ಕೊಟ್ಟಿಲ್ಲ, ಸೈಕಲ್ ಕೊಟ್ಟಿಲ್ಲ, ಶೂ-ಸಾಕ್ಸ್ ಕೊಟ್ಟಿಲ್ಲ. ಮಂತ್ರಿಗಳಿಗೆ ಮಾನ-ಮರ್ಯಾದೆ ಇದೆಯಾ? ಎಂದು ಕಿಡಿಕಾರಿದರು.
ಇದನ್ನೂ ಓದಿ: ಬ್ರೇಕ್ಫಾಸ್ಟ್ ಮೀಟ್ನಲ್ಲಿ ಸರ್ಕಾರದ ವಿರುದ್ಧ ಹೋರಾಟ, ಸಿದ್ದರಾಮಯ್ಯ ಹುಟ್ಟುಹಬ್ಬದ ಬಗ್ಗೆ ಚರ್ಚೆ: ಡಿಕೆಶಿ