ETV Bharat / state

ನಕಲಿ ಅಲೋಪತಿ ವೈದ್ಯರಿಗೆ ಶಾಕ್! 3 ಕ್ಲಿನಿಕ್ ಬಂದ್, ಮುಂದುವರೆದ ಕಾರ್ಯಾಚರಣೆ - ಜನತಾ ಕ್ಲಿನಿಕ್

ಚಾಮರಾಜನಗರ ಜಿಲ್ಲೆಯಲ್ಲಿ ನಕಲಿ ಅಲೋಪತಿ ವೈದ್ಯರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು 'ಚಿಕಿತ್ಸೆ' ನೀಡಿದ್ದಾರೆ.

ನಕಲಿ ಅಲೋಪತಿ ವೈದ್ಯರಿಗೆ ಶಾಕ್
ನಕಲಿ ಅಲೋಪತಿ ವೈದ್ಯರಿಗೆ ಶಾಕ್
author img

By

Published : Nov 3, 2022, 12:12 PM IST

ಚಾಮರಾಜನಗರ: ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದ ನಕಲಿ ಅಲೋಪತಿ ವೈದ್ಯರಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಸಿ‌ ಮುಟ್ಟಿಸಿದರು. ನಕಲಿ ಕ್ಲಿನಿಕ್​ಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿಯಲ್ಲಿ ಘಟನೆ ನಡೆದಿದೆ.

ತಾಲೂಕಿನ ನಕಲಿ ಕ್ಲಿನಿಕ್​ಗಳ ಮೇಲೆ ಡಿಎಚ್ಒ ಡಾ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕೌದಳ್ಳಿ ಗ್ರಾಮದಲ್ಲಿರುವ ಆದಮ್ ಕ್ಲಿನಿಕ್, ಜನತಾ ಕ್ಲಿನಿಕ್ ಹಾಗೂ ದೀಪಾ ಕ್ಲಿನಿಕ್​ಗಳಿಗೆ ನೋಟಿಸ್ ಜಾರಿ ಮಾಡಿ ಬಂದ್ ಮಾಡಿಸಿದ್ದಾರೆ‌. ಹನೂರು ತಾಲೂಕಿನ ವಿವಿಧೆಡೆ ಇಂಥ ಕ್ಲಿನಿಕ್​ಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು.

ಇದನ್ನೂ ಓದಿ: ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್ ಕಡಿವಾಣಕ್ಕೆ ಕ್ರಮ: ಸಚಿವ ಸುಧಾಕರ್

ಅಜ್ಜೀಪುರ, ರಾಮಾಪುರ ಮತ್ತು ಕೂಡ್ಲೂರು, ಹೂಗ್ಯಂ ಇತರೆ ಕ್ಲಿನಿಕ್​ಗಳ ಪರಿಶೀಲನೆಯನ್ನು ಗುರುವಾರ ಅಧಿಕಾರಿಗಳು ನಡೆಸಿದ್ದಾರೆ. ಲೈಸೆನ್ಸ್ ಒಬ್ಬರ ಹೆಸರಿನಲ್ಲಿದ್ದು, ಚಿಕಿತ್ಸೆ ಕೊಡುವವರು ಮತ್ತೊಬ್ಬರು ಆಗಿದ್ದಾರೆ. ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.