ಚಾಮರಾಜನಗರ: ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಪರಿಶೀಲಿಸಿದ್ದೇನೆ. ವೈದ್ಯರು, ಡಿಸಿ ಜತೆ ಸಭೆ ನಡೆಸಿದ್ದು, ಸದ್ಯ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ಚಾಮರಾಜನಗರ ಆಕ್ಸಿಜನ್ ದುರಂತದ ತನಿಖಾಧಿಕಾರಿ ಶಿವಯೋಗಿ ಕಳಸದ್ ತಿಳಿಸಿದರು.
ಜಿಲ್ಲಾಸ್ಪತ್ರೆಯ ಪರಿಶೀಲನೆ ಮತ್ತು ಸಭೆ ಬಳಿಕ ಮಾತನಾಡಿದ ಅವರು, ತನಿಖೆ ಪ್ರಾಥಮಿಕ ಹಂತದಲ್ಲಿದೆ. ಎಲ್ಲರ ಬಳಿ ಮಾಹಿತಿ ಪಡೆದಿದ್ದು ವರದಿಯಲ್ಲಿ ಎಲ್ಲವೂ ತಿಳಿಸುತ್ತೇನೆಂದರು.
ಮೇಲ್ನೋಟಕ್ಕೆ ಯಾರ ಲೋಪ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಚರ್ಚೆ ಬೇಡ. ವರದಿ ಸಲ್ಲಿಸಲು ಮೂರು ದಿನಗಳ ಅವಕಾಶವಿದೆ. ಮೈಸೂರಿನ ಆಕ್ಸಿಜನ್ ಪ್ಲಾಂಟ್ಗೂ ಕೂಡ ಭೇಟಿ ನೀಡುತ್ತೇನೆ. ಸವಿವರವಾದ ವರದಿ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆ ಪರಿಶೀಲಿಸುತ್ತಿರುವ ಕಳಸದ್... ಮತ್ತೊಂದೆಡೆ ವ್ಯಕ್ತಿಯಿಂದ ಏಕಾಂಗಿ ಪ್ರತಿಭಟನೆ!
ಇದಕ್ಕೂ ಮುನ್ನ ಘಟನೆಗೆ ಯಾರು ಕಾರಣ, ದುರಂತಕ್ಕೆ ಯಾರು ಹೊಣೆ ಎಂದು ಹೋರಾಟಗಾರು ಕಳಸದ್ ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.