ETV Bharat / state

ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ಸಿದ್ಧತೆ: 6.5 ಲಕ್ಷ ಲಡ್ಡು ತಯಾರಿ, 480 ಬಸ್​​ ಸೇವೆ

ಕರ್ನಾಟಕದ ಪ್ರಮುಖ ದೇವಾಲಯಗಳಲ್ಲೊಂದಾದ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆಗೆ ಭರದಿಂದ ಸಿದ್ಧತೆ ನಡೆಯುತ್ತಿದೆ ಎಂದು ಕಾರ್ಯದರ್ಶಿ ಜೈವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.

author img

By

Published : Feb 19, 2020, 6:35 PM IST

kn_cnr_01_mmhills_av_7202614
ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ, 6.5 ಲಕ್ಷ ಲಡ್ಡು ತಯಾರಿ, 480 ಬಸ್ ಸಂಚಾರ ಆರಂಭ!

ಚಾಮರಾಜನಗರ: ಕರ್ನಾಟಕದ ಪ್ರಮುಖ ದೇವಾಲಯಗಳಲ್ಲೊಂದಾದ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆಗೆ ಭರದಿಂದ ಸಿದ್ಧತೆ ನಡೆಯುತ್ತಿದೆ ಎಂದು ಕಾರ್ಯದರ್ಶಿ ಜೈವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ಸಿದ್ಧತೆ: 6.5 ಲಕ್ಷ ಲಡ್ಡು ತಯಾರಿ, 480 ಬಸ್​ ಸೇವೆ ಆರಂಭ!

ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ಮಾಹಿತಿ ನೀಡಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಭಕ್ತಾದಿಗಳಿಗೆ ಪ್ರಸಾದ ನೀಡಲು 6.5 ಲಕ್ಷ ಲಡ್ಡು ತಯಾರಿ ಶರವೇಗದಿಂದ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ನೂತನ ಸ್ನಾನಘಟ್ಟ ಹಾಗೂ ಶೌಚಾಲಯಗಳನ್ನು ಉದ್ಘಾಟನೆಗೊಳಿಸಲು ಕಾಯದೇ ಭಕ್ತರ ಹಿತದೃಷ್ಟಿಯಿಂದ ಬಳಕೆಗೆ ಮುಕ್ತಗೊಳಿಸಲಾಗಿದೆ. ಮಧ್ಯರಾತ್ರಿ 2ರವರೆಗೆ ಪ್ರಸಾದ ವಿತರಿಸಲು ಕ್ರಮ ವಹಿಸಲಾಗಿದೆ. ನೆರಳಿನ ವ್ಯವಸ್ಥೆ, ಮಹಿಳೆಯರಿಗೆ ಪ್ರತ್ಯೇಕ ಸ್ನಾನ ಗೃಹಗಳು, ತುರ್ತು ಆರೋಗ್ಯ ಸೇವೆಗಳನ್ನು ನೀಡಲು ಅಲ್ಲಲ್ಲಿ ಆರೋಗ್ಯ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸಾರಿಗೆ ಓಕೆ- ನೆಟ್​ವರ್ಕ್​ ಸಿಗಲ್ಲ ಜೋಕೆ: ಮಳವಳ್ಳಿ, ಕನಕಪುರ, ಟಿ.ನರಸೀಪುರ,‌ ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಕೆಎಸ್ಆರ್​​ಟಿಸಿಯ 480 ಬಸ್​​ಗಳ ವಿಶೇಷ ಸಂಚಾರ ಆರಂಭಿಸಲಾಗಿದೆ. ಇನ್ನು ಕೆಎಸ್ಆರ್​​ಟಿಸಿ ಚಾಮರಾಜನಗರ ವಿಭಾಗಕ್ಕೆ 2019ರಲ್ಲಿ ಮಲೆಮಹದೇಶ್ವರ ಬೆಟ್ಟದಿಂದಲೇ 1 ಕೋಟಿ ರೂ.ಗೂ ಅಧಿಕ ಆದಾಯ ಬಂದಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಲೆಮಹದೇಶ್ವರ ಬೆಟ್ಟದಲ್ಲಿ ಮೊಬೈಲ್ ನೆಟ್​ವರ್ಕ್​ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಾಗಮಲೆ ಭವನದ ಮೇಲೆ ಟವರ್ ಅಳವಡಿಕೆಗೆ ಪ್ರಾಧಿಕಾರ ಅನುಮತಿಯನ್ನೂ ನೀಡಿತ್ತು. ಆದರೆ, ಬಿಎಸ್ಎನ್ಎಲ್ ಮಾತ್ರ ಮೊಬೈಲ್ ಟವರ್ ಅಳವಡಿಸದಿರುವುದರಿಂದ ಎಂದಿನಂತೇ ಭಕ್ತರು ಮೊಬೈಲ್ ನೆಟ್​​ವರ್ಕ್​ನಿಂದ ದೂರ ಉಳಿಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.