ಚಾಮರಾಜನಗರ : ತೀವ್ರ ಕುತೂಹಲ ಮೂಡಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸ್ಥಾನ(kasapa District president)ಕ್ಕೆ ಆರ್ಎಸ್ಎಸ್ ಕಾರ್ಯಕರ್ತ, ಹೋರಾಟಗಾರರಾದ ಗುಂಡ್ಲುಪೇಟೆಯ ಎಂ. ಶೈಲಕುಮಾರ್ (M. Shailakumar) ಆಯ್ಕೆಯಾಗಿದ್ದಾರೆ. ಭಾರೀ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪತ್ರಕರ್ತ ನಾಗೇಶ್ ಸೋಸ್ಲೆ, ಜಾನಪದ ಅಕಾಡೆಮಿ ಸದಸ್ಯ ಸಿ ಎಂ ನರಸಿಂಹಮೂರ್ತಿ, ಪತ್ರಕರ್ತೆ ಸ್ನೇಹಾ ಹಾಗೂ ಶೈಲೇಶ್ ನಾಲ್ವರು ಸ್ಪರ್ಧಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸ್ನೇಹಾ ತಟಸ್ಥರಾಗಿ ಉಳಿದುಕೊಂಡು ನಾಗೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಇಂದು ನಡೆದ ಚುನಾವಣೆಯಲ್ಲಿ 4830 ಮಂದಿ ಪೈಕಿ ಒಟ್ಟು 2183 ಮತಗಳು ಚಲಾವಣೆಗೊಂಡಿದ್ದವು. 22 ಮತಗಳು ತಿರಸ್ಕೃತಗೊಂಡಿವೆ. ಸ್ವೀಕೃತಗೊಂಡ ಒಟ್ಟು ಮತಗಳಲ್ಲಿ ಸಿ.ಎಂ. ನರಸಿಂಹಮೂರ್ತಿ ಅವರಿಗೆ 673, ನಾಗೇಶ್ ಸೋಸ್ಲೆ ಅವರಿಗೆ 150, ಸ್ನೇಹಾ ಅವರಿಗೆ 22 ಹಾಗೂ ಶೈಲಕುಮಾರ್ ಅವರಿಗೆ 1316 ಮತ ಲಭಿಸಿವೆ. ಅತಿ ಹೆಚ್ಚು ಮತದಾನ ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಚಲಾವಣೆಯಾಗಿದೆ. ಹನೂರಿನಲ್ಲಿ ಅತ್ಯಲ್ಪ ಎಂದರೆ ಕೇವಲ 90 ಮತ ಚಲಾವಣೆಗೊಂಡಿವೆ.
ಶೈಲಕುಮಾರ್ ನೀಡಿದ್ದ ಆಶ್ವಾಸನೆಗಳು
1. ಚಾಮರಾಜನಗರದಲ್ಲಿ ಸಾಹಿತ್ಯ ಪರಿಷತ್ ಮಂದಿರ ಸ್ಥಾಪನೆ
2. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸೇರಿದಂತೆ ಪ್ರಮುಖ ಸಮ್ಮೇಳನ ನಡೆಸುವ ಭರವಸೆ
3. ತಾಲೂಕು ಪರಿಷತ್ಗಳನ್ನು ಸಕ್ರಿಯವಾಗಿಸುವುದು, ಯುವಕರನ್ನು ಸಾಹಿತ್ಯ ಚಟುವಟಿಕೆ, ಪರಿಷತ್ ಕಾರ್ಯಕ್ರಮಗಳಲ್ಲಿ ತೊಡಗಿಸುವುದು.
ಓದಿ: ಸಿದ್ದರಾಮಯ್ಯನವರು ಹತೋಟಿ ತಪ್ಪಿ ಮಾತನಾಡುತ್ತಿದ್ದಾರೆ : ಬಿಎಸ್‌ವೈ ಆಕ್ರೋಶ!