ETV Bharat / state

ಫೇಸ್​ಬುಕ್​ನಿಂದ ಸರ್ಕಾರಿ ಶಾಲೆ ಆಯ್ತು ಹೈಟೆಕ್​... ಹೇಗೆ ಅನ್ನೋದೇ ಇಂಟ್ರೆಸ್ಟಿಂಗ್​! - dovelped

ಫೇಸ್​​ಬುಕ್​ನಿಂದ ಲವ್ ದೋಖಾ, ಹನಿ ಟ್ರಾಪ್, ಮನಿ ಪಂಗನಾಮವಾಯ್ತು ಅಂತಾ ಆಗಾಗ್ಗೆ ಸುದ್ದಿಯನ್ನು ನೋಡ್ತಾ ಇರ್ತೀರಿ‌. ಆದರೆ ಅದೇ ಫೇಸ್ ಬುಕ್​ನಿಂದ ಇಂದು ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿ ಪ್ರಗತಿ ಕಾಣುತ್ತಿದೆ.

ಚಾಮರಾಜನಗರ
author img

By

Published : Jun 27, 2019, 2:33 PM IST

ಚಾಮರಾಜನಗರ: ಫೇಸ್​​​ಬುಕ್​ನಿಂದ ಲವ್ ದೋಖಾ, ಹನಿ ಟ್ರಾಪ್, ಮನಿ ಪಂಗನಾಮವಾಯ್ತು ಅಂತಾ ಆಗಾಗ್ಗೆ ಸುದ್ದಿಯನ್ನು ನೋಡ್ತಾ ಇರ್ತೀರಿ‌. ಆದರೆ, ಅದೇ ಫೇಸ್ ಬುಕ್​ನಿಂದ ಇಂದು ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿ ಪ್ರಗತಿ ಕಾಣುತ್ತಿದೆ.

ಹೌದು, ಈ ಶಾಲೆ ಇರೋದು ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದಲ್ಲಿ. ಈ ಸರ್ಕಾರಿ ಶಾಲೆಯನ್ನು ನೋಡಿದರೆ, ಯಾವ ಖಾಸಗಿ ಕಾನ್ವೆಂಟಿಗೂ ಕಮ್ಮಿ ಏನೂ ಇಲ್ಲ. ಆಟದ ಮೈದಾನ, ಮಕ್ಕಳು ಕೂರಲು ಗ್ರಾನೈಟ್ ಬೆಂಚುಗಳು, ಬಣ್ಣ-ಬಣ್ಣದ ಬಾವುಟಗಳು, ಕೊಠಡಿಯ ಮುಂದೆ ಸ್ವಾಗತ ಕಮಾನು ಶಾಲೆಯ ಅಂದ ಹೆಚ್ಚಿಸುವ ಜೊತೆಗೆ ಆಹ್ಲಾದಕರ ವಾತಾವರಣವಿದೆ.

ಫೇಸ್​​​ಬುಕ್​ನಿಂದಲೇ ಸಹಾಯ ಪಡೆದು ಮಾದರಿ ಶಾಲೆಯಾಗಿರುವ ಚಾಮರಾಜನಗರದ ಶಾಲೆ

ಫೇಸ್​​ಬುಕ್​ ಶಾಲೆಯ ಪ್ರಗತಿಗಾಗಿ ಬಳಸಿಕೊಳ್ಳುತ್ತಿರುವವರು ದೈಹಿಕ ಶಿಕ್ಷಕರಾದ ನಾರಾಯಣಸ್ವಾಮಿ. ದಿನವೂ ತಾವು ಫೇಸ್​​​ಬುಕ್ ನಲ್ಲಿ ಸಮಾಜ ಸೇವಕರು, ಎನ್​ಜಿಒಗಳು, ಹೊಸ ಸ್ನೇಹಿತರನ್ನು ಸಂಪರ್ಕಿಸಿ ಶಾಲಾಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡುತ್ತಾರೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುವಂತೆ ಕೋರುತ್ತಾರೆ. ಈಗಾಗಲೇ ಫೇಸ್​​​​ಬುಕ್​ನಲ್ಲಿ ಪರಿಚಿತರಾದ ಅನೇಕರು 5 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಶಾಲೆಗೆ ಕೊಡುಗೆ ನೀಡಿದ್ದಾರೆ.

1 ರಿಂದ 8 ನೇ ತರಗತಿವರೆಗೆ ಒಟ್ಟು 186 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ದಾನಿಗಳು ನೀಡಿದ ಕೊಡುಗೆಯಿಂದ ಎಲ್ಲ ವಿದ್ಯಾರ್ಥಿಗಳು ಉಚಿತ ನೋಟ್ ಬುಕ್, ಪೆನ್ನು, ಶಾಲಾ ಬ್ಯಾಗ್,ಬಿಸಿಯೂಟ ಸವಿಯಲು ತಟ್ಟೆ ಎಲ್ಲವನ್ನೂ ಪಡೆದಿದ್ದಾರೆ. ಹಾಕಿ ಸ್ಟಿಕ್ಸ್, ಡಂಬಲ್ಸ್, ವಾಲಿಬಾಲ್, ಥ್ರೋ ಬಾಲ್, ಬ್ಯಾಂಡ್ ಸೆಟ್, ಸ್ಕಿಪ್ಪಿಂಗ್, ರಿಂಗ್ಸ್ ಎಲ್ಲವನ್ನೂ ಈ ಶಾಲೆಗೆ ಫೇಸ್ ಬುಕ್ ಸ್ನೇಹಿತರು ನೀಡಿದ್ದಾರೆ.

ಇನ್ನೂ ಶಾಲೆಯ ಸುತ್ತ ಗಿಡಗಳನ್ನು ನೆಟ್ಟಿರುವ ಶಿಕ್ಷಕರು ತಾವೂ ಒಳಗೊಂಡಂತೆ ಮಕ್ಕಳಿಗೆ ಒಂದೊಂದು ಗಿಡಗಳನ್ನು ದತ್ತು ನೀಡಿದ್ದು, ಆ ಗಿಡಗಳ ಪಾಲನೆಯನ್ನು ದತ್ತು ಪಡೆದವರೇ ನೋಡಿಕೊಳ್ಳಬೇಕಿದೆ. ಶಾಲೆಗೆ ಕೊಡುಗೆ ನೀಡಲು ಬಂದ ದಾನಿಗಳು ಒಂದೊಂದು ಗಿಡವನ್ನು ನೆಡುತ್ತಾರೆ.

ನಟ ದರ್ಶನ್ ಅಭಿಮಾನಿಗಳ ಸಂಘವು ಕೂಡಾ ಶಾಲೆಗೆ ಕೊಡುಗೆ ನೀಡಲು ಮುಂದೆ ಬಂದಿದ್ದು, ಡಿಬಾಸ್ ದರ್ಶನ್ ಅವರ ಮೂಲಕವೇ ಶಾಲೆಗೆ ಸುಸಜ್ಜಿತ ಲ್ಯಾಬ್ ನೀಡುವ ಭರವಸೆ ನೀಡಿದ್ದಾರೆ. ಆ ದಿನಗಳು ಚೇತನ್ ಕೂಡ ಶಾಲೆಗೆ ಬಂದು ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಮಾತುಗಳನ್ನಾಡಿದ್ದು, ಬಿಗ್ ಬಾಸ್ ಭುವನ್ ಹಾಗೂ ಇನ್ನಿತರ ಚಿತ್ರನಟರು ಶಾಲಾಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದು ದೈಹಿಕ ಶಿಕ್ಷಕ ನಾರಾಯಣ ಹೇಳುತ್ತಾರೆ.

Intro:ಈ ಸರ್ಕಾರಿ ಶಾಲೆ ಪ್ರಗತಿಗೆ ಫೇಸ್ ಬುಕ್ ಕಾರಣ!

ಚಾಮರಾಜನಗರ: ಫೇಸ್ ಬುಕ್ ನಿಂದ ಲವ್ ದೋಖಾ, ಹನಿ ಟ್ರಾಪ್, ಮನಿ ಪಂಗನಾಮವಾಯ್ತು ಅಂತಾ ಆಗಾಗ್ಗೆ ಸುದ್ದಿಯನ್ನು ನೋಡ್ತಾ ಇರ್ತೀರಿ‌. ಆದರೆ, ಅದೇ ಫೇಸ್ ಬುಕ್ ನಿಂದ ಸರ್ಕಾರಿ ಶಾಲೆಯೊಂದು ಕಾನ್ವೆಂಟ್ ಗೆ ಸಡ್ಡು ಹೊಡೆಯುವ ರೀತಿ ಪ್ರಗತಿ ಕಾಣುತ್ತಿರುವುದನ್ನು ನಾವು ತೋರಸ್ತೀವಿ ನೋಡಿ.

Body:ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಸರ್ಕಾರಿ ಶಾಲೆಗೆ ಎಡತಾಕಿದರೇ ಯಾವುದೋ ಖಾಸಗಿ ಕಾನ್ವೆಂಟಿಗೆ ಬಂದಂತೆ ನಿಮಗನಿಸುತ್ತದೆ. ಆಟದ ಮೈದಾನ, ಮಕ್ಕಳು ಕೂರಲು ಗ್ರಾನೈಟ್ ಬೆಂಚುಗಳು, ಬಣ್ಣ-ಬಣ್ಣದ ಬಾವುಟಗಳು, ಕೊಠಡಿಯ ಮುಂದೆ ಸ್ವಾಗತ ಕಮಾನು ಶಾಲೆಯ ಅಂದ ಹೆಚ್ಚಿಸುವ ಜೊತೆಗೆ ಆಹ್ಲಾದಕರ ವಾತಾವರಣ ಉಂಟುಮಾಡಿದೆ.

ಎಫ್ ಬಿಯಿಂದ ಅಭಿವೃದ್ಧಿ ಹೇಗೆ?

ಫೇಸ್ ಬುಕ್ಕನ್ನು ಶಾಲೆಯ ಪ್ರಗತಿಗೆ ಬಳಸಿಕೊಳ್ಳುತ್ತಿರುವವರು ದೈಹಿಕ ಶಿಕ್ಷಕರಾದ ನಾರಯಣಸ್ವಾಮಿ. ಪ್ರತಿದಿನವು ತಾವು ಫೇಸ್ ಬುಕ್ ನಲ್ಲಿ ಸಮಾಜ ಸೇವಕರು, ಎನ್ ಜಿಒಗಳು, ಹೊಸ ಸ್ನೇಹಿತರನ್ನು ಸಂಪರ್ಕಿಸಿ ಶಾಲಾಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡುತ್ತಾರೆ. ಹುಟ್ಟುಹಬ್ಬ, ವಿವಾಹ ವಾರ್ಷಿಕಕೋತ್ಸವ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುವಂತೆ ಕೋರುತ್ತಾರೆ.

ಈಗಾಗಲೇ ಫೇಸ್ ಬುಕ್ ನಿಂದ ಪರಿಚಿತರಾದ ಸಮಾಜ ಸೇವಕರು, ಎನ್ ಜಿಒಗಳಿಂದ ೫ ಲಕ್ಷ ರೂ.ಗಿಂತಲೂ ಹೆಚ್ಚಿನ ಮೌಲ್ಯದ ವಸ್ತುಗಳು ಕೊಡುಗೆ ರೂಪದಲ್ಲಿ ಶಾಲೆಗೆ ಹರಿದುಬಂದಿದೆ.

೧-೮ ನೇ ತರಗತಿವರೆಗೆ ಒಟ್ಟು ೧೮೨ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ದಾನಿಗಳು ನೀಡಿದ ಕೊಡುಗೆಯಿಂದ ಎಲ್ಲಾ ವಿದ್ಯಾರ್ಥಿಗಳು ಉಚಿತ ನೋಟ್ ಬುಕ್, ಪೆನ್ನು, ಶಾಲಾ ಬ್ಯಾಗ್,ಬಿಸಿಯೂಟ ಸವಿಯಲು ತಟ್ಟೆ ಎಲ್ಲವನ್ನೂ ಪಡೆದಿದ್ದಾರೆ. ಹಾಕಿ ಸ್ಟಿಕ್ಸ್, ಡಂಬಲ್ಸ್, ವಾಲಿಬಾಲ್, ಥ್ರೋ ಬಾಲ್, ಬ್ಯಾಂಡ್ ಸೆಟ್, ಸ್ಕಿಪ್ಪಿಂಗ್, ರಿಂಗ್ಸ್ ಎಲ್ಲವನ್ನೂ ಈ ಶಾಲೆಗೆ ಫೇಸ್ ಬುಕ್ ಸ್ನೇಹಿತರು ನೀಡಿದ್ದಾರೆ.

ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಮಕ್ಕಳಿಗೇ ನೇರವಾಗಿ ದಾನಿಗಳೇ ವಿತರಿಸುವುದರಿಂದ ಅವರಿಗೂ ಒಂದು ಆತ್ಮತೃಪ್ತಿ ಸಿಗಲಿದೆ. ಶಾಲೆಯು ಯಾವುದೇ ರೀತಿಯ ನಗದುದಾನವನ್ನು ಪಡೆಯದಿರುವುದು ಫೇಸ್ ಬುಕ್ ಸ್ನೇಹಿತರಲ್ಲಿ ವಿಶ್ವಾಸಾರ್ಹತೆ ಮೂಡಲು ಕಾರಣವಾಗಿದೆ.

ಗಿಡಗಳ ದತ್ತು- ಪ್ರತಿಯೊಬ್ಬರ ಹುಟ್ಟುಹಬ್ಬ, ದಾನಿಗಳ ಹೆಸರಲ್ಲೂ ಗಿಡ:

ಶಾಲಾವರಣದ ಸುತ್ತ ಗಿಡಗಳನ್ನು ಹಾಕಿರುವ ಶಿಕ್ಷಕರು ತಾವೂ ಒಳಗೊಂಡಂತೆ ಮಕ್ಕಳಿಗೆ ಒಂದೊಂದು ಗಿಡಗಳನ್ನು ದತ್ತು ನೀಡಿದ್ದು ಆ ಗಿಡಗಳ ಪಾಲನೆಯನ್ನು ದತ್ತು ಪಡೆದವರೇ ನೋಡಿಕೊಳ್ಳಬೇಕಿದೆ. ಇನ್ನು, ಶಾಲೆಗೆ ಕೊಡುಗೆ ನೀಡಲು ಬಂದ ದಾನಿಗಳು ಒಂದೊಂದು ಗಿಡವನ್ನು ನೆಡಲಿದ್ದಾರೆ.

ಉತ್ತಮ ಅಡುಗೆಕೋಣೆ, ಶಾಲಾ ಗೋಡೆಗಳಲ್ಲಿನ ಚಿತ್ರಗಳು, ಫ್ಯಾನ್, ಪ್ರತಿ ಕೊಠಡಿಗೂ ಒಂದು ಗಡಿಯಾರ, ಸ್ವಾಗತ ಕಮಾನು ಎಲ್ಲವೂ ಫೇಸ್ಬುಕ್ ಸ್ನೇಹಿತರು ಮತ್ತು ಹಳೇ ವಿದ್ಯಾರ್ಥಿಗಳ ಕೊಡುಗೆಯಾಗಿದೆ.

ಸೆಲೆಬ್ರಿಟಿಗಳ ಭರವಸೆ:
ದರ್ಶನ್ ಅಭಿಮಾನಿಗಳ ಸಂಘವು ಕೂಡ ಶಾಲೆಗೆ ಕೊಡುಗೆ ನೀಡಲು ಮುಂದೆ ಬಂದಿದ್ದು ಡಿಬಾಸ್ ದರ್ಶನ್ ಅವರ ಮೂಲಕವೇ ಶಾಲಗೆ ಸುಸಜ್ಜಿತ ಲ್ಯಾಬ್ ನೀಡುವ ಭರವಸೆ ನೀಡಿದ್ದಾರೆ. ಆ ದಿನಗಳು ಚೇತನ್ ಕೂಡ ಶಾಲೆಗೆ ಬಂದು ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಮಾತುಗಳನ್ನಾಡಿದ್ದು ಬಿಗ್ ಬಾಸ್ ಭುವನ್ ಹಾಗೂ ಇನ್ನಿತರೆ ಚಿತ್ರನಟರು ಶಾಲಾಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದು ದೈಹಿಕ ಶಿಕ್ಷಕ ನಾರಯಣ ಹೇಳುತ್ತಾರೆ.

[ ಬೈಟ್: ನಾರಾಯಣ, ಧೈಹಿಕ ಶಿಕ್ಷಕ, ಬ್ಲೂ ಶರ್ಟ್]
Conclusion:
ಫೇಸ್ ಬುಕ್ ನಲ್ಲಿ ಮೆಸೆಜ್ ನೋಡಿ ಶಾಲೆ ಬಗ್ಗೆ ಮಾಹಿತಿ ತಿಳಿದು ವಿದ್ಯಾರ್ಥಿಗಳಿಗೆ ಬ್ಯಾಗ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್ ಕ್ರೀಡಾಸಾಮಾಗ್ರಿ ನೀಡಿದ್ದೇವೆ. ನಾವೇ ಒಂದು ಸಂಸ್ಥೆ ಸ್ಥಾಪಿಸಿಕೊಂಡು ಸಹಾಯಹಸ್ತ ಚಾಚುವ ಕೆಲಸ ಮಾಡುತ್ತಿದ್ದೇವೆ. ದಾನಿಗಳ ಮೂಲಕವೇ ಅಭಿವೃದ್ಧಿ ಕಾಣುತ್ತಿರುವ ಈ ಶಾಲೆ ಯಾವ ಕಾನ್ವೆಂಟಿಗೂ ಕಡಿಮೆ ಇಲ್ಲಾ ಎನ್ನುತ್ತಾರೆ ಬೆಂಗಳೂರಿನಿಂದ ಬಂದು ಶಾಲೆಗೆ ಕೊಡುಗೆ ನೀಡಿದ ನಾರಾಯಣರೆಡ್ಡಿ.

ಬೈಟ್: ನಾರಯಾಣರೆಡ್ಡಿ, ದಾನಿ[ ಹ್ಯಾಟ್ ಧರಿಸಿರುವ ಯುವಕ]

ಮತ್ತೊಬ್ಬರ ಬೈಟ್ ಅಗತ್ಯ ಇದ್ದರೆ ಬಳಸಿ
ಬೈಟ್: ಸುಷ್ಮಾ, ದಾನಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.