ETV Bharat / state

ಆರ್​​​ಟಿಸಿ ತಿದ್ದುಪಡಿಗೆ ಲಂಚ ಪಡೆಯುತ್ತಿದ್ದ ಶಿರಸ್ತೇದಾರ ಎಸಿಬಿ ಬಲೆಗೆ

ಜಮೀನು ಆರ್​​ಟಿಸಿ ತಿದ್ದುಪಡಿಗಾಗಿ ರೈತನ ಬಳಿ ಲಂಚ ಪಡೆಯುತ್ತಿದ್ದ ವೇಳೆ ತಾಲೂಕು ಕಚೇರಿಯ ಆರ್​​ಆರ್​​​ಟಿ ಶಾಖೆಯ ಶಿರಸ್ತೇದಾರ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದಾನೆ..

author img

By

Published : Jul 17, 2020, 9:39 PM IST

RRT Officer caught  when he demand and taking bribe from farmer
ಆರ್​​​ಟಿಸಿ ತಿದ್ದುಪಡಿಗೆ ಲಂಚ ಪಡೆಯುತ್ತಿದ್ದ ಶಿರಸ್ತೇದಾರ ಎಸಿಬಿ ಬಲೆಗೆ

ಚಾಮರಾಜನಗರ : ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುವಾಗ ಶಿರಸ್ತೇದಾರನೋರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ. ತಾಲೂಕು ಕಚೇರಿಯ ಆರ್​​ಆರ್​​​ಟಿ ಶಾಖೆಯ ಶಿರಸ್ತೇದಾರ ಮಂಜುನಾಥ್ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾನೆ.

ಬದನಗುಪ್ಪೆಯ ನಾಗನಾಯಕ ಎಂಬುವರು ತಮ್ಮ ಜಮೀನಿನ‌ ಆರ್​​ಟಿಸಿ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿದ ವೇಳೆ 30 ಸಾವಿರ ರೂ‌ಪಾಯಿಗೆ ಬೇಡಿಕೆ ಇಟ್ಟು, ಮೊದಲ ಕಂತಿನಲ್ಲಿ 10 ಸಾವಿರ ರೂ. ಕೊಡಲು ಒತ್ತಾಯಿಸಿದ್ದರು ಎನ್ನಲಾಗಿದೆ.

10 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಡಿವೈಎಸ್​​ಪಿ ಸದಾನಂದ ತಿಪ್ಪಣ್ಣವರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.