ETV Bharat / state

ಚಾಮರಾಜನಗರ: ಮೊದಲ ಬೆಳೆ ದೇವರಿಗೆ.. ಕಾಡಿನಲ್ಲಿ ಸೋಲಿಗರ ರೊಟ್ಟಿ ಹಬ್ಬದ ಸಂಭ್ರಮ - Chamarajanagar

ತಿಂಗಳುಗಟ್ಟಲೇ ಫಸಲನ್ನು ಕಾದು ಕೈಗೆ ಬಂದ ನಂತರ ಸಾಮೂಹಿಕವಾಗಿ ಎಲ್ಲರೂ ಸೇರಿ ಮೊದಲ ಫಸಲಿನ ರಾಗಿಯಲ್ಲಿ ರೊಟ್ಟಿ ತಯಾರಿಸಿ ದೇವರಿಗೆ ನೈವೇದ್ಯ ಇಟ್ಟು ಸಹಪಂಕ್ಷಿ ಭೋಜನ ಮಾಡುವುದೇ 'ರೊಟ್ಟಿ ಹಬ್ಬ'.

Rotti  festival
ಸೋಲಿಗರ ರೊಟ್ಟಿ ಹಬ್ಬ ಸಂಭ್ರಮ
author img

By

Published : Jan 6, 2023, 8:35 PM IST

ಸೋಲಿಗರ ರೊಟ್ಟಿ ಹಬ್ಬ ಸಂಭ್ರಮ..

ಚಾಮರಾಜನಗರ: ಸೋಲಿಗ ಸಮುದಾಯದ ವಿಶಿಷ್ಟ ಹಾಗೂ ಸಾಂಪ್ರದಾಯಿಕ ರೊಟ್ಟಿ ಹಬ್ಬವನ್ನು ಇಂದು ಹನೂರು ತಾಲೂಕಿನ ಕೌಳಿಹಳ್ಳ ಹಾಡಿ ಜನರು ಸಂಭ್ರಮದಿಂದ ಆಚರಿಸಿದರು. ತಿಂಗಳುಗಟ್ಟಲೇ ಫಸಲನ್ನು ಕಾದು ಕೈಗೆ ಬಂದ ನಂತರ ಸಾಮೂಹಿಕವಾಗಿ ಎಲ್ಲರೂ ಸೇರಿ ಮೊದಲ ಫಸಲಿನ ರಾಗಿಯಲ್ಲಿ ರೊಟ್ಟಿ ತಯಾರಿಸಿ ದೇವರಿಗೆ ನೈವೇದ್ಯ ಇಟ್ಟು ಸಹಪಂಕ್ಷಿ ಭೋಜನ ಮಾಡುವುದೇ ರೊಟ್ಟಿ ಹಬ್ಬದ ವಿಶೇಷ. ಸೋಲಿಗರ ಪ್ರಮುಖ ಹಬ್ಬಗಳಲ್ಲಿ ಇದು ಕೂಡ ಒಂದಾಗಿದೆ.

ಕೌಳಿಹಳ್ಳದಲ್ಲಿನ ಮಹದೇಶ್ವರ ಇವರ ಆರಾಧ್ಯ ದೈವ. ಮೊದಲ ರಾಗಿ ಫಸಲನ್ನು ದೇವರಿಗೆ ಅರ್ಪಿಸಲಿದ್ದು ದೇವರಿಗೆ ಹರಕೆ ಸಲ್ಲಿಸುವ ತನಕ ಮೊದಲ ಫಸಲಿನ ರಾಗಿಯನ್ನು ಇವರು ಉಪಯೋಗಿಸುವುದಿಲ್ಲ. ಅಲ್ಲದೇ ಬೇರೆಯವರು ಅದನ್ನು ತೆಗೆದುಕೊಂಡು ಹೋಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಲಿದ್ದಾರೆ. ಪ್ರತಿ ಕುಟುಂಬವು ತಲಾ ಒಂದು ಕೆ.ಜಿ ಯಷ್ಟು ರಾಗಿಯನ್ನು ಸಂಗ್ರಹಿಸಿದ ಬಳಿಕ ಸ್ವಚ್ಛಗೊಳಿಸಿ ಹಿಟ್ಟು ತಯಾರಿಸುತ್ತಾರೆ. ಹಿಟ್ಟನ್ನು ಚೆನ್ನಾಗಿ ಕಲಸಿ ಮುತ್ತುಗದ ಎಲೆಯಲ್ಲಿ ರೊಟ್ಟಿಯನ್ನು ತಟ್ಟುತ್ತಾರೆ. ಬಳಿಕ ಅದನ್ನು, ಮೊದಲೇ ಹರಡಿದ್ದ ಕೆಂಡದ ಮೇಲಿಟ್ಟು ಬೇಯಿಸಿ ನಂತರ ಒಂದೆಡೆ ಗುಡ್ಡೆ ಹಾಕುತ್ತಾರೆ. ರೊಟ್ಟಿಯನ್ನು ತಟ್ಟಲು ಮತ್ತು ಕೆಂಡದಲ್ಲಿ ಬೇಯಿಸಲು ಹತ್ತಾರು ಮಂದಿ ಗಿರಿಜನರು ತೊಡಗಿಸಿಕೊಳ್ಳುತ್ತಾರೆ.

Rotti  festival
ಸೋಲಿಗರ ರೊಟ್ಟಿ ಹಬ್ಬ ಸಂಭ್ರಮ

ಸುಮಾರು ಐದಾರು ಗಂಟೆಗಳ ಪರಿಶ್ರಮದಿಂದ ರೊಟ್ಟಿ ತಯಾರಿಸುತ್ತಾರೆ. ಬಳಿಕ ರೊಟ್ಟಿಯನ್ನು ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸಿ ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಯಾಗಲಿ ಹಾಗೂ ಹಾಡಿಯಲ್ಲಿ ರೋಗರುಜಿನಗಳು ದೂರಾಗಲಿ ಎಂದು ಪ್ರಾರ್ಥಿಸಿ, ಪ್ರಸಾದ ಪಡೆದ ಬಳಿಕ ಒಟ್ಟಿಗೆ ಕುಳಿತು ಆಹಾರ ಸೇವಿಸುತ್ತಾರೆ. ರೊಟ್ಟಿಯ ಜತೆ ಸೇವಿಸಲು ಕುಂಬಳಕಾಯಿ ಪಲ್ಯ, ಅನ್ನ ಹಾಗೂ ಅವರೆಕಾಳು ಸಾಂಬಾರ್‌ ತಯಾರಿಸಲಾಗುತ್ತದೆ. ಸೋಲಿಗರ ರೊಟ್ಟಿ ಹಬ್ಬದಲ್ಲಿ ಇತರ ಸಮುದಾಯದವರು ಪಾಲ್ಗೊಳ್ಳುವುದು ಮತ್ತೊಂದು ವಿಶೇಷ. ಒಂದೊಂದು ಹಾಡಿ ಜನರು ಒಂದೊಂದು ದಿನ ಮಾಡಲಿದ್ದು ಬಿಳಿಗಿರಿರಂಗನ ಬೆಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರಿ ರೊಟ್ಟಿ ಹಬ್ಬ ಆಚರಿಸುತ್ತಾರೆ.

ಇದನ್ನೂ ಓದಿ: ರೊಟ್ಟಿ ಪಂಚಮಿ: ಭಾವೈಕ್ಯತೆ ಹಾಗೂ ಬಾಂಧವ್ಯದ ಸಂಕೇತ ಈ 'ರೊಟ್ಟಿ ಹಬ್ಬ'!

ಬಾಂಧವ್ಯದ ಸಂಕೇತ ರೊಟ್ಟಿ ಹಬ್ಬ: ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ನಾಗರಪಂಚಮಿ ಬಹುದೊಡ್ಡ ಹಬ್ಬ. ಈ ಹಬ್ಬದ ಸಂದರ್ಭದಲ್ಲಿ ರೊಟ್ಟಿಗೂ ಒಂದು ದಿನವನ್ನು ವಿಶೇಷವಾಗಿ ಮೀಸಲಿಡಲಾಗುತ್ತದೆ. ಇದನ್ನು ರೊಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಪ್ರತಿ ಬಾರಿ ರೊಟ್ಟಿಹಬ್ಬವನ್ನು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿತ್ತು. ವಿವಿಧ ಬಗೆಯ ರೊಟ್ಟಿ, ವಿವಿಧ ಬಗೆಯ ಪಲ್ಯ ಈ ದಿನದ ಮುಖ್ಯ ಆಹಾರ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ಖಡಕ್ ರೊಟ್ಟಿ, ಎಳ್ಳು ಹಚ್ಚಿದ ಹಾಗೂ ಮೆತ್ತನೆಯ ರೊಟ್ಟಿಗಳು, ನಾಲ್ಕಾರು ಬಗೆಯ ಪಲ್ಯ ಚಟ್ನಿ, ಉಪ್ಪಿನಕಾಯಿ, ಹಸಿ ತರಕಾರಿ, ಸೊಪ್ಪು ಹೀಗೆ ರೊಟ್ಟಿ ಹಬ್ಬದ ಊಟದ ವಿಶೇಷತೆ.

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರೊಟ್ಟಿಗೆ ಒಂದು ವಿಶೇಷ ಸ್ಥಾನವಿದೆ. ರೊಟ್ಟಿ ಈ ಪ್ರದೇಶದ ಮುಖ್ಯ ಆಹಾರ ಖಾದ್ಯ. ರೊಟ್ಟಿ ಊಟ ಮಾಡಿದರೆ ಈ ಭಾಗದ ಜನರಿಗೆ ಊಟ ಕಂಪ್ಲೀಟ್ ಆದಂಗೆ. ಇಂತಹ ರೊಟ್ಟಿಗೆ ನಾಗರ ಪಂಚಮಿಯಲ್ಲಿ ಒಂದು ದಿನ ಹಬ್ಬ ಆಚರಿಸಲಾಗುತ್ತದೆ. ರೊಟ್ಟಿ ಹಬ್ಬವೆಂದೇ ಕರೆಯುವ ಈ ಆಚರಣೆಗೆ ಬಗೆಬಗೆಯ ರೊಟ್ಟಿಗಳು ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ವಿನಿಮಯವಾಗುತ್ತವೆ. ನಾಗರಪಂಚಮಿಯ ಹಬ್ಬದ ನಾಲ್ಕನೇ ದಿನದಂದು ರೊಟ್ಟಿ ಹಬ್ಬ ಆಚರಿಸಲಾಗುತ್ತದೆ.

ಒಂದೊಂದು ಹಬ್ಬದ ಆಚರಣೆ ಹಿಂದೆಯೂ ಸಹ ಒಂದು ಸಂದೇಶವಿರುತ್ತದೆ ಮತ್ತು ಒಂದು ಕಾರಣವಿರುತ್ತದೆ. ಹೀಗಾಗಿ ನಮ್ಮ ಹಿರಿಯರು ಹಬ್ಬಗಳ ಆಚರಣೆಯನ್ನು ರೂಢಿಗೆ ತಂದಿದ್ದಾರೆ ಅನ್ನೋದು ಸತ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.