ETV Bharat / state

ನೀರು ಕೇಳುವ ನೆಪದಲ್ಲಿ ದರೋಡೆ: ಮೂವರ ಬಂಧನ

ನೀರು ಕೇಳುವ ನೆಪದಲ್ಲಿ ದರೋಡೆ ಮಾಡಿರುವ ಘಟನೆ ಚಾಮರಾಜನಗರ ಸಮೀಪದ ಮಾದಾಪುರದಲ್ಲಿ ನಡೆದಿದೆ. ಒಟ್ಟು ಆರು ಜನ ದರೋಡೆ ಮಾಡಿದ್ದು, ಮೂವರನ್ನು ಬಂಧಿಸಲಾಗಿದೆ.

ನೀರು ಕೇಳುವ ನೆಪದಲ್ಲಿ ದರೋಡೆ
ನೀರು ಕೇಳುವ ನೆಪದಲ್ಲಿ ದರೋಡೆ
author img

By

Published : Sep 20, 2022, 3:21 PM IST

ಚಾಮರಾಜನಗರ: ನೀರು ಕೇಳುವ ನೆಪದಲ್ಲಿ ಕಾಂಕ್ರೀಟ್ ಪ್ಲಾಂಟ್​ನಲ್ಲಿ ದರೋಡೆ ಮಾಡಿದ್ದ, ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಲಾಗಿದೆ.

ಮೈಸೂರು ಮೂಲದ ನದೀಂಖಾನ್, ತನು, ಶಹಬ್ಬಾಜ್ ಬಂಧಿತ ಆರೋಪಿಗಳು‌.‌ ಚಾಮರಾಜನಗರ ಸಮೀಪದ ಮಾದಾಪುರದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ನೀರು ಕೇಳುವ ನೆಪದಲ್ಲಿ ಕಾಂಕ್ರೀಟ್ ಪ್ಲಾಂಟ್​ನಲ್ಲಿ, 1.64 ಲಕ್ಷ ಮೌಲ್ಯದ ಕಬ್ಬಿಣದ ವಸ್ತುಗಳನ್ನು 6 ಮಂದಿ ದರೋಡೆ ಮಾಡಿದ್ದರು.‌

ಇದನ್ನೂ ಓದಿ: ವಿದ್ಯುತ್ ಕಡಿತಗೊಳಿಸಿ ತಡರಾತ್ರಿ ಎಟಿಎಂ ದರೋಡೆ ಮಾಡಿದ ಕಳ್ಳರು

ಚಾಮರಾಜನಗರ ಪೂರ್ವ ಠಾಣೆ ಪಿಐ ಆನಂದ್ ನೇತೃತ್ವದಲ್ಲಿ ಮಹೇಶ್, ಪುಟ್ಟರಾಜು, ಚಂದ್ರಶೇಖರ್, ನಂದಕುಮಾರ್ ತಂಡ ಕಾರ್ಯಾಚರಣೆ ಕೈಗೊಂಡು ಈ ಮೂವರನ್ನು ಬಂಧಿಸಿದ್ದಾರೆ‌. ತಲೆಮರೆಸಿಕೊಂಡಿರುವ ಮೂವರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇನ್ನು ಬಂಧಿತರಿಂದ ಲಕ್ಷಾಂತರ ಮೌಲ್ಯದ ಕಳ್ಳತನ ಮಾಡಿದ ವಸ್ತುಗಳು, ಒಂದು ಕಾರು, ಒಂದು ಗೂಡ್ಸ್ ಆಟೋ, ಮೊಬೈಲ್​, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.