ETV Bharat / state

ಸಾವರ್ಕರ್, ಹೆಡ್ಗೆವಾರ್ ಹುಸಿ ದೇಶಭಕ್ತರ ಪಾಠ ತೆಗೆಯಿರಿ: ಸಾಹಿತಿ ಕುಂ ವೀರಭದ್ರಪ್ಪ ಆಗ್ರಹ - ಸಾಹಿತಿ ಕುಂ ವೀರಭದ್ರಪ್ಪ

''ಹೊಸ ಸರ್ಕಾರ ಬಂದಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಜಾರಿ ಮಾಡಬೇಕು. ಸಾವರ್ಕರ್, ಹೆಡ್ಗೆವಾರ್ ಎಂಬ ಹುಸಿ ದೇಶಭಕ್ತರ ಕುರಿತು ಪಠ್ಯದಲ್ಲಿರುವ ವಿಚಾರಗಳನ್ನು ತೆಗೆಯಬೇಕು. ಯಾವ ಪಠ್ಯವನ್ನು ಬೋಧಿಸಬೇಕೆಂದು ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಿಬೇಕು'' ಎಂದು ಸಾಹಿತಿ ಕುಂ ವೀರಭದ್ರಪ್ಪ ಆಗ್ರಹಿಸಿದರು.

Literary Kum Veerabhadrappa
ಸಾಹಿತಿ ಕುಂ.ವೀರಭದ್ರಪ್ಪ
author img

By

Published : Jun 8, 2023, 5:15 PM IST

ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿದರು.

ಚಾಮರಾಜನಗರ: ''ಸರ್ಕಾರಗಳು ಬಂದಾಗ ಶಾಲಾ ಪಠ್ಯಗಳು ಬದಲಾಗುತ್ತವೆ. ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆಯಬೇಕು'' ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ 500 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದೆ. ಅವರು ರೂಪಿಸಿದ್ದ ಪಠ್ಯದಲ್ಲಿ ಮಕ್ಕಳ ಭವಿಷ್ಯ ಇರಲಿಲ್ಲ. ವೈಚಾರಿಕತೆ ಇರಲಿಲ್ಲ. ಪಠ್ಯ ರಚನೆ ಸಮಿತಿಗೆ ಅಪಕ್ವ ರೋಹಿತ್ ಚಕ್ರತೀರ್ಥ ಅವರನ್ನು ಅಧ್ಯಕ್ಷನನ್ನಾಗಿ ಮಾಡಿದ್ದು ಮಾಜಿ ಸಚಿವ ಬಿ. ಸಿ. ನಾಗೇಶ್ ಅವರು ಮಾಡಿದ್ದ ಮೊದಲ ತಪ್ಪು'' ಎಂದು ಕಿಡಿಕಾರಿದರು.

''ಹೊಸ ಸರ್ಕಾರ ಬಂದಿದ್ದು, ಹಿರಿಯ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಜಾರಿ ಮಾಡಬೇಕು. ಸಾವರ್ಕರ್, ಹೆಡ್ಗೆವಾರ್ ಎಂಬ ಹುಸಿ ದೇಶಭಕ್ತರ ಕುರಿತು ಪಠ್ಯದಲ್ಲಿರುವ ವಿಚಾರಗಳನ್ನು ತೆಗೆಯಬೇಕು. ಯಾವ ಪಠ್ಯವನ್ನು ಬೋಧಿಸಬೇಕೆಂದು ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಿಬೇಕು'' ಎಂದು ಆಗ್ರಹಿಸಿದರು. ''ಭಾರತೀಯತೆ, ಸಂಸ್ಕೃತಿ ಪಠ್ಯಕ್ರಮ ಎಂದು ಸುನೀಲ್ ಕುಮಾರ್‌ ಹೇಳಿರುವುದು ಅಪಕ್ವ ಹೇಳಿಕೆ, ಭಾರತೀಯತೆ ಎಂದರೆ ಸಮಗ್ರತೆ, ಎಲ್ಲರನ್ನೂ ಒಳಗೊಳ್ಳುವ ಸಮಗ್ರತೆ, ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಪಾರ್ಸಿ ಎಲ್ಲರನ್ನೂ ಒಳಗೊಳ್ಳಬೇಕು. ಆರ್​ಎಸ್​ಎಸ್ ವಿಚಾರ ಭಾರತೀಯತೆಯಲ್ಲ. ಶೇ.1.5ರಷ್ಟು ಜನರ ಭಾರತೀಯತೆ ಅಲ್ಲ'' ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಜಾತಿ ಗಣತಿ ವರದಿ ಬಹಿರಂಗವಾಗಬೇಕು, ಜಾರಿಯಾಗಬೇಕು: ''ಈ ಹಿಂದೆ ನಡೆಸಿದ್ದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಗಣತಿ ವರದಿ ಬಹಿರಂಗವಾಗಬೇಕು, ಜಾರಿಯಾಗಬೇಕು. ಬ್ರಾಹ್ಮಣ ಸೇರಿದಂತೆ ಎಲ್ಲಾ ವರ್ಗಗಳಲ್ಲಿ ಯಾರು ಹಿಂದುಳಿದಿವರೋ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಅನುದಾನ ಕೊಡಬೇಕು'' ಎಂದು ಆಗ್ರಹಿಸಿದರು.

ಬೆದರಿಕೆ ಪತ್ರ ಇನ್ನೂ ನಿಂತಿಲ್ಲ: ''ಕಳೆದ 15 ದಿನಗಳ ಹಿಂದೆಯೂ ನನಗೆ ಬೆದರಿಕೆ ಪತ್ರ ಬಂದಿದೆ. ಯಾವ ಲೇಖಕನಿಗೆ ಹೆಚ್ಚು ಬೆದರಿಕೆ ಪತ್ರ ಬರುವೋದೋ ಆತನೇ ನಿಜವಾದ ಲೇಖಕ, ಲೇಖಕನಿಗೆ ಬೆದರಿಕೆ ಪತ್ರಗಳು ಪ್ರೇಮ ಪತ್ರಗಳು ಇದ್ದಂತೆ ಎಂದು ಕೊಂಡಿದ್ದೇನೆ. ಮೋದಿಯನ್ನು ಅವಹೇಳನ ಮಾಡುತ್ತೀರಿ. ಮುಸ್ಲಿಮರನ್ನು ಓಲೈಸುತ್ತೀರಿ ಎಂದು ಬೆದರಿಕೆ ಪತ್ರಗಳು ಬರುತ್ತಿದ್ದು, ಒಟ್ಟು ನನಗೆ 16 ಪತ್ರಗಳು ಬಂದಿದೆ'' ಎಂದರು.

ಇದನ್ನೂ ಓದಿ: ಬಾಡಿಗೆದಾರರಿಗೂ ಗೃಹಜ್ಯೋತಿ ಉಚಿತ ವಿದ್ಯುತ್.. ತೆರಿಗೆ ಪಾವತಿದಾರರಿಗಿಲ್ಲ ಗೃಹ ಲಕ್ಷ್ಮಿ ಯೋಜನೆ

ಬಡವರಿಗೆ ಕೊಟ್ಟರೇ ಇವರಪ್ಪನ ಗಂಟು ಹೋಗೋದೇನು?: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸಂಬಂಧ ಅವರು ಇದೇ ವೇಳೆ ಮಾತನಾಡಿ, ''ಗ್ಯಾರಂಟಿ ಯೋಜನೆಗಳು ಬಡವರ ಪರವಾದ ಯೋಜನೆಗಳು, ಬಡವರಿಗೆ 10 ಕೆ.ಜಿ. ಅಕ್ಕಿ ಕೊಟ್ಟರೇ ಇವರಪ್ಪನ ಗಂಟು ಹೋಗೋದೇನು? ಬಿಜೆಪಿ ಅವರು ಲೋಕಸಭೆಯಲ್ಲಿ ಗೆಲ್ಲಬೇಕಾದರೇ ಗ್ಯಾರಂಟಿ ಯೋಜನೆ ಬೆಂಬಲಿಸಬೇಕು'' ಎಂದರು.

ಇದನ್ನೂ ಓದಿ: 'ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು; ದೇಶಭಕ್ತ ಡಾ.ಹೆಡ್ಗೆವಾರ್ ಪಾಠ ಇರಬಾರದು ಎಂಬುದು ಅಸಹಿಷ್ಣುತೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.