ಚಾಮರಾಜನಗರ: ಕಾಡಿನ ಕಿರು ಅರಣ್ಯ ಉತ್ಪನ್ನಗಳನ್ನೇ ನಂಬಿ ಜೀವನ ಸಾಗಿಸುವ ಸೋಲಿಗರು, ಬೇಟೆ ಕುರುಬರು ಸೇರಿದಂತೆ ಸ್ಥಳೀಯ ಬುಡಕಟ್ಟು ಜನರಿಗೆ ಇದೀಗ ಕಾಡನ್ನು ಬೆೆಂಕಿ ಅನಾಹುತಗಳಿಂದ ರಕ್ಷಿಸುವ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ನೂರಾರು ಬುಡಕಟ್ಟು ಜನರಿಗೆ ಬಂಡೀಪುರ ಅರಣ್ಯ ಇಲಾಖೆ 5ರಿಂದ 6 ತಿಂಗಳವರೆಗೆ ನೌಕರಿ ಒದಗಿಸಿದೆ.
ಬರಗಾಲದಲ್ಲಿ ಕೂಲಿಗೆ ಕಷ್ಟಪಡುತ್ತಿದ್ದ ಈ ಜನರು ಇದೀಗ ಅರಣ್ಯದಲ್ಲಿ ಕಾಡ್ಗಿಚ್ಚು ವೀಕ್ಷಕರಾಗಿ ಕೆಲಸಕ್ಕೆ ನೇಮಕವಾಗಿದ್ದಾರೆ. ಬೆಂಕಿ ರೇಖೆ ನಿರ್ಮಾಣ ಹಾಗೂ ಕಾಡ್ಗಿಚ್ಚು ಕಾವಲುಗಾರರಾಗಿ ಇವರು ಕೆಲಸ ಮಾಡಲಿದ್ದಾರೆ. ಹುಲಿ ಸಂರಕ್ಷಿತ ವ್ಯಾಪ್ತಿಯ 500ಕ್ಕೂ ಹೆಚ್ಚು ಬುಡಕಟ್ಟು ಮಂದಿಗೆ ದಿನಗೂಲಿ ಕೆಲಸ ನೀಡಿದ್ದು, ತಿಂಗಳಿಗೆ ಸುಮಾರು 16 ಸಾವಿರ ರೂಪಾಯಿ ವೇತನ ಸಿಗಲಿದೆ.
![Recruitment of Soligas forest fire watchers Bandipur forest ಸೋಲಿಗರಿಗೆ ನೌಕರಿ ನೆರವು ಬಂಡೀಪುರ ಅರಣ್ಯ ಕಾಡ್ಗಿಚ್ಚು ಕಾವಲು](https://etvbharatimages.akamaized.net/etvbharat/prod-images/11-01-2024/kn-cnr-01-bandipura-av-ka10038_11012024120029_1101f_1704954629_807.jpeg)
ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, "ಕಾಡ್ಗಿಚ್ಚು ಕಾವಲುಗಾರರನ್ನಾಗಿ ಶೇ.100ರಷ್ಟು ಸ್ಥಳೀಯ ಆದಿವಾಸಿಗಳನ್ನೇ ನೇಮಿಸಲಾಗಿದೆ. ನವೆಂಬರ್ನಿಂದ ಡಿಸೆಂಬರ್ರವರೆಗೆ ಬೆಂಕಿ ರೇಖೆ ನಿರ್ಮಿಸಲು ಅವರನ್ನು ನೇಮಿಸಿಕೊಳ್ಳುತ್ತೇವೆ. ಜನವರಿಯಿಂದ ಏಪ್ರಿಲ್ವರೆಗೆ ಅವರನ್ನೇ ಕಾಡ್ಗಿಚ್ಚು ಕಾವಲುಗಾರರನ್ನಾಗಿ ಮುಂದುವರೆಸಲಾಗುತ್ತದೆ. ಕನಿಷ್ಠ 6 ತಿಂಗಳತನಕ ಇಲಾಖೆಯಲ್ಲಿ ಉದ್ಯೋಗ ಸಿಗಲಿದೆ. ಅವರನ್ನು ಕಾಲಕಾಲಕ್ಕೆ ನೇಮಿಸಿಕೊಂಡು ಉದ್ಯೋಗ ನೀಡುತ್ತೇವೆ. ಮಳೆಗಾಲ ಆರಂಭವಾಗಿ ಉತ್ತಮ ಮಳೆ ಬರುವವರೆಗೂ ಕಾಡ್ಗಿಚ್ಚು ಕಾವಲುಗಾರರಾಗಿ ಕಾರ್ಯ ಮಾಡಲಿದ್ದಾರೆ" ಎಂದು ಮಾಹಿತಿ ನೀಡಿದರು.
![Recruitment of Soligas forest fire watchers Bandipur forest ಸೋಲಿಗರಿಗೆ ನೌಕರಿ ನೆರವು ಬಂಡೀಪುರ ಅರಣ್ಯ ಕಾಡ್ಗಿಚ್ಚು ಕಾವಲು](https://etvbharatimages.akamaized.net/etvbharat/prod-images/11-01-2024/kn-cnr-01-bandipura-av-ka10038_11012024120029_1101f_1704954629_374.jpg)
ಇದನ್ನೂ ಓದಿ: ಸ್ವಂತ ಖರ್ಚಿನಲ್ಲೇ ಶಾಲಾ ಮಕ್ಕಳನ್ನು ವಿಮಾನದಲ್ಲಿ ಹಾರಾಡಿಸಿದ ಹೆಡ್ ಮಾಸ್ಟರ್