ಚಾಮರಾಜನಗರ: ಅಪ್ರಾಪ್ತೆ ಮೇಲೆ ವೃದ್ಧ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ನಡೆದಿದೆ. ಬೇಗೂರು ಗ್ರಾಮದ ಮಹದೇವಶೆಟ್ಟಿ (60) ಅತ್ಯಾಚಾರ ಎಸಗಿರುವ ಆರೋಪಿ.
ಮಹದೇವಶೆಟ್ಟಿ ತಮ್ಮ ಮನೆ ಸಮೀಪ ಇದ್ದ 15 ವರ್ಷದ ಬಾಲಕಿಯ ಮೇಲೆ ಸೋಮವಾರ ಮಧ್ಯಾಹ್ನ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತೆಯ ತಾಯಿ ಮತ್ತು ಆರೋಪಿ ಮಹದೇವಶೆಟ್ಟಿ ಹೆಂಡತಿ ಕೆಲಸದ ಮೇಲೆ ಹೊರಗಡೆ ಹೋಗಿದ್ದರು. ಈ ಸಮಯದಲ್ಲಿ ಆರೋಪಿಯು ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿ ಗಾಯಗೊಳಿಸಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸಾವರ್ಕರ್ ಫ್ಲೆಕ್ಸ್ ತೆರವಿನ ಬಳಿಕ ಶಿವಮೊಗ್ಗ ಉದ್ವಿಗ್ನ: ಯುವಕನಿಗೆ ಚಾಕು ಇರಿತ