ETV Bharat / state

ಬಾಲಕಿ ಮೇಲೆ ಅತ್ಯಾಚಾರ: ಸಹೋದರರು ಸೇರಿ 7 ಮಂದಿಗೆ 10 ವರ್ಷ ಜೈಲು

ಬಾಲಕಿ ಅತ್ಯಾಚಾರ ಎಸಗಿದ್ದ ವ್ಯಕ್ತಿ ಸೇರಿದಂತೆ 7 ಮಂದಿಗೆ ಶಿಕ್ಷೆ -ಎಸ್ಪಿ ಬೆನ್ನಲ್ಲೇ ಸಿಇಒ ವರ್ಗಾವಣೆ -ಮನೆಗೆ ಕನ್ನ ಹಾಕುವಾಗ ಜನರಿಗೆ ಸಿಕ್ಕಿಬಿದ್ದ ಕಳ್ಳ

Chamarajanagar Court
ಚಾಮರಾಜನಗರ ನ್ಯಾಯಾಲಯ
author img

By

Published : Feb 1, 2023, 11:14 AM IST

ಚಾಮರಾಜನಗರ : ಬಾಲಕಿಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ ವ್ಯಕ್ತಿ ಸೇರಿದಂತೆ 7 ಮಂದಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ನ್ಯಾಯಾಲಯವು ಆದೇಶ ಹೊರಡಿಸಿದೆ. ಚಾಮರಾಜನಗರದ ಮೀನಜ್ ಖಾನ್, ಸಲ್ಮಾನ್ ಖಾನ್, ಶಾರುಕ್ ಖಾನ್, ವಹಿದ್, ಅಮೀರ್, ಮುಸ್ಕಾಕಿಂ, ಸೈಯದ್ ಉಮರ್ ಶಿಕ್ಷೆಗೊಳಗಾದ ಅಪರಾಧಿಗಳು. 16 ವರ್ಷದ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಮೀನಜ್ ಖಾನ್ ಹಾಗೂ ಈತನಿಗೆ ಸಹಕರಿಸಿದ ಈತನ ಅಣ್ಣ ಸೇರಿ ಇತರೆ ಅಪರಾಧಿಗಳ ಕೃತ್ಯ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಶಾರಣಿ 10 ವರ್ಷ ಕಠಿಣ ಶಿಕ್ಷೆ ನೀಡಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾದಿಕಾರವು 2 ಲಕ್ಷ ಪರಿಹಾರ ಕೊಡುವಂತೆ ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.

ಎಸ್ಪಿ ಬೆನ್ನಲ್ಲೇ ಸಿಇಒ ವರ್ಗಾವಣೆ: ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಟಿ‌.ಪಿ.ಶಿವಕುಮಾರ್ ವರ್ಗಾವಣೆ ಮಾಡಿ ಅವರ ಸ್ಥಳಕ್ಕೆ ಪದ್ಮಶ್ರೀ ಸಾಹೋ ಅವರನ್ಜು ನೇಮಕ ಮಾಡಿದ ಬೆನ್ನಲ್ಲೇ ಚಾಮರಾಜನಗರ ಜಿಪಂ ಸಿಇಒ ಕೆ.ಎಂ.ಗಾಯತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಕೆ.ಎಂ.ಗಾಯತ್ರಿ ಅವರನ್ನು ಮೈಸೂರು ಜಿಪಂ ಸಿಇಒ ಆಗಿ ವರ್ಗಾಯಿಸಲಾಗಿದ್ದು, ಇವರ ಜಾಗಕ್ಕೆ ಮೈಸೂರಿನ ಆಡಾಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ (ಆಡಳಿತ) ಎಸ್‌.ಪೂವಿತಾ ಅವರನ್ನು ನೇಮಕ‌ ಮಾಡಲಾಗಿದೆ.

ಮನೆಗೆ ಕನ್ನ ಹಾಕುವಾಗ ಸಿಕ್ಕಿಬಿದ್ದ ಆರೋಪಿ : ಚಾಮರಾಜನಗರದಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿರುವ ಘಟನೆ ಮಂಗಳವಾರದಂದು ನಡೆದಿದೆ. ಕೋರ್ಟ್ ರಸ್ತೆಯ ಮನೆಯೊಂದಕ್ಕೆ ಕನ್ನ ಹಾಕಲು ಹೊಂಚು ಹಾಕಿ ಯತ್ನಿಸುತ್ತಿದ್ದ ವೇಳೆ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಯು ಮಧ್ಯ ವಯಸ್ಕನಾಗಿದ್ದು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

strange calf without a jaw and three legs
ದವಡೆ ಇಲ್ಲದ ಹಾಗೂ ಮೂರು ಕಾಲಿನ ವಿಚಿತ್ರ ಕರು

ವಿಚಿತ್ರ ಕರು ಜನನ : ದವಡೆ ಇಲ್ಲದ ಹಾಗೂ ಮೂರು ಕಾಲಿನ ವಿಚಿತ್ರ ಕರುವೊಂದು ಜನಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಮ್ಮಣ್ಣ ಎಂಬವರಿಗೆ ಸೇರಿದ ಹಸುವೊಂದು ಈ ವಿಚಿತ್ರ ಕರುವಿಗೆ ಜನ್ಮ ನೀಡಿದ್ದು, ಹುಟ್ಟಿರುವ ಕರುವಿಗೆ ಕೆಳದವಡೆಯೇ ಇಲ್ಲದಾಗಿದೆ.

ಜೊತೆಗೆ, ಕರುವಿಗೆ ಕೇವಲ ಮೂರು ಕಾಲು ಮಾತ್ರ ಇದ್ದು ಸರಾಗವಾಗಿ ನಿಂತು ಓಡಾಡುತ್ತಿದೆ. ತಮ್ಮಣ್ಣ ಕುಟುಂಬ ಬಾಟಲಿ ಮೂಲಕ ಹಾಲು ಕುಡಿಸುತ್ತಿದ್ದು, ಆರೈಕೆ ಮಾಡುತ್ತಿದ್ದಾರೆ. ನೋಡಲು ಭಯಂಕರವಾಗಿ ಅಷ್ಟೇ ಧಾರುಣವಾಗಿ ಕರು ಕಾಣಿಸುತ್ತಿದ್ದು ಇದನ್ನು ನೋಡಲು ಜನ ತಂಡೊಪತಂಡವಾಗಿ ಬರುತ್ತಿದ್ದಾರೆ.

ಇದನ್ನೂ ಓದಿ :11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.