ETV Bharat / state

ಆರ್‌.ಧ್ರುವನಾರಾಯಣ ಮೃತದೇಹ ತಡರಾತ್ರಿ ಚಾಮರಾಜನಗರದ ಹೆಗ್ಗವಾಡಿಗೆ ಆಗಮನ: ಇಂದು ಅಂತ್ಯಕ್ರಿಯೆ

author img

By

Published : Mar 12, 2023, 6:53 AM IST

Updated : Mar 12, 2023, 8:55 AM IST

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಅವರ​ ಪಾರ್ಥಿವ ಶರೀರ ತಡರಾತ್ರಿ ಚಾಮರಾಜನಗರಕ್ಕೆ ಆಗಮಿಸಿತು. ಇಂದು ಹೆಗ್ಗವಾಡಿ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

dhruvanarayan
ಧ್ರುವನಾರಾಯಣ್ ಪಾರ್ಥಿವ ಶರೀರ
ಧ್ರುವನಾರಾಯಣ ಮೃತದೇಹ ಹುಟ್ಟೂರಿಗೆ ಆಗಮನ

ಚಾಮರಾಜನಗರ: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ​ ನಿನ್ನೆ ನಿಧನರಾಗಿದ್ದು, ಮೃತದೇಹ ಕಳೆದ ರಾತ್ರಿ 12.30ಕ್ಕೆ ಹುಟ್ಟೂರು ಚಾಮರಾಜನಗರ ತಲುಪಿತು. ಇಲ್ಲಿಯ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಜನೆಯ ಮೂಲಕ ಅಗಲಿದ ನಾಯಕನಿಗೆ ಕಂಬನಿ ಮಿಡಿದರು.

ಶನಿವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಮೃತದೇಹವನ್ನು ಚಾಮರಾಜನಗರಕ್ಕೆ ತರಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಸಾವಿರಾರು ಅಭಿಮಾನಿಗಳು ಮೈಸೂರಿನಲ್ಲಿ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದು ರಾತ್ರಿ ಚಾಮರಾಜನಗರಕ್ಕೆ ರವಾನಿಸಲಾಗಿದೆ. ಮಾರ್ಗಮಧ್ಯೆ ಮುತ್ತಿಗೆ, ಬದನಗುಪ್ಪೆ, ಬೆಂಡರವಾಡಿ ಸೇರಿದಂತೆ ಹಲವೆಡೆ ಗ್ರಾಮಸ್ಥರು ಅಂತಿಮ‌ ನಮನ ಸಲ್ಲಿಸಿದರು.‌

ಇದನ್ನೂ ಓದಿ : ಧ್ರುವನಾರಾಯಣ ಪಾರ್ಥಿವ ಶರೀರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಶಿವಕುಮಾರ್: ವಿಡಿಯೋ

ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಿಂದ ಆರಂಭವಾದ ಮೆರವಣಿಗೆ ಸತ್ತಿ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಗೆ ತಲುಪಿ, ಬಳಿಕ ಪಕ್ಷದ ವತಿಯಿಂದ ನಮನ‌ ಸಲ್ಲಿಸಲಾಯಿತು. ನಂತರ ಹರವೆ ಗ್ರಾಮದ ಮಾರ್ಗವಾಗಿ ಸ್ವಗ್ರಾಮ ಹೆಗ್ಗವಾಡಿ ತಲುಪಿದೆ. ಪುತ್ರ ದರ್ಶನ್, ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ, ಹೆಚ್.ಡಿ‌.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಇನ್ನಿತರರು ಜತೆಗಿದ್ದರು.

ಇದನ್ನೂ ಓದಿ : ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಧ್ರುವನಾರಾಯಣ್ ಅಂತ್ಯಕ್ರಿಯೆ: ಸಿಎಂ ಬಸವರಾಜ ಬೊಮ್ಮಾಯಿ

ಜಿಲ್ಲೆಯ ಹಲವೆಡೆ ಧ್ರುವನಾರಾಯಣ​ ಕಟೌಟ್ ಕಂಡುಬಂತು. ಅಭಿಮಾನಿಗಳು ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.‌ ಹೆಗ್ಗವಾಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಒಂದು ಮತದ ಮೌಲ್ಯ ತೋರಿಸಿದ್ದ ಧ್ರುವನಾರಾಯಣ್.. ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿ ಕಣ್ಮರೆ

ಆರ್.ಧ್ರುವನಾರಾಯಣ ಬಗ್ಗೆ..: ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಸಂಸತ್ತಿನಲ್ಲಿ ರಾಜ್ಯದ ಸಂಸದರುಗಳ ಪೈಕಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ಹೆಚ್ಚು ಅನುದಾನ ತಂದ ರಾಜ್ಯದ ಮೊದಲ ಸಂಸದ ಎಂಬ ಹೆಗ್ಗಳಿಕೆಯೂ ಇವರದ್ದು. ಸಂಸದೀಯ ಪಟುವಾಗಿ, ರಾಜಕೀಯ ನಾಯಕನಾಗಿ ಶ್ರಮ, ಬದ್ಧತೆಯಿಂದ ಹೆಸರು ಮಾಡಿದ್ದರು.

ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ : ಧ್ರುವನಾರಾಯಣ್​ ಇನ್ನಿಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ : ಸುರ್ಜೇವಾಲ

ನಿನ್ನೆ ಆಗಿದ್ದೇನು?: ನಿನ್ನೆ (ಶನಿವಾರ) ಬೆಳಗ್ಗೆ ವಾಕಿಂಗ್​ಗೆ ಹೋಗಿ ಮನೆಗೆ ವಾಪಸ್​ ಆಗಿದ್ದ ಧ್ರುವನಾರಾಯಣ ಮೈಸೂರಿನ ತಮ್ಮ ಮನೆ ಮೇಲಿನ ಮಹಡಿಯಿಂದ ಕಾರು ಚಾಲಕನನ್ನು ಕರೆದರಂತೆ. ಚಾಲಕ ಅಲ್ಲಿಗೆ ಬರುವಷ್ಟರಲ್ಲಿಯೇ ವಾಂತಿ ಮಾಡಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೊಟ್ಟೆಹುಣ್ಣು ಒಡೆದು ತೀವ್ರರಕ್ತಸ್ರಾವದಿಂದ ಹೃದಯ ಮತ್ತು ಶ್ವಾಸಕೋಶ ಸ್ತಂಭನವಾಗಿ ಧ್ರುವನಾರಾಯಣ​ ಮೃತಪಟ್ಟಿದ್ದಾರೆ ಎಂದು ಅವರಿಗೆ ಪ್ರಥಮ ಹಂತದ ಚಿಕಿತ್ಸೆ ನೀಡಿದ್ದ ವೈದ್ಯರು ತಿಳಿಸಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Last Updated : Mar 12, 2023, 8:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.