ಚಾಮರಾಜನಗರ: ಗಂಡ-ಹೆಂಡತಿಯ ಜಗಳಕ್ಕೆ ಮಗುವೊಂದು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮೂಕನಹಳ್ಳಿಯಲ್ಲಿ ಘಟನೆ ನಡೆದಿದೆ.
ಗ್ರಾಮದ ಭಾಗ್ಯ ಹಾಗೂ ಜಯಶಂಕರ ದಂಪತಿಯ ಪುತ್ರಿ ರುಚಿತಾ (1) ಮೃತಪಟ್ಟಿರುವ ಮಗು. ಜಯಶಂಕರ ಕುಡಿತದ ದಾಸನಾಗಿದ್ದು, ಪ್ರತಿದಿನ ಪತ್ನಿಗೆ ಹೊಡೆಯುತ್ತಿದ್ದನಂತೆ. ಆದರೆ ಕೆಲದಿನಗಳ ಹಿಂದೆ ಇದೇ ರೀತಿ ಪತ್ನಿಗೆ ಹೊಡೆಯಲು ಮುಂದಾದಾಗ ಮಗುವಿಗೆ ಪೆಟ್ಟು ಬಿದ್ದಿತ್ತು. ಇದರಿಂದ ಗಂಭೀರ ಸ್ಥಿತಿ ತಲುಪಿದ್ದ ರುಚಿತಾಳನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ.
ಇನ್ನು ಮಗುವಿನ ತಾಯಿ ಭಾಗ್ಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.