ETV Bharat / state

'ಗೊರೆಹಬ್ಬ' ಸಂಭ್ರಮದ ನಡುವೆ ಪುನೀತ್ ಅಗಲಿಕೆಗೆ ಅಭಿಮಾನಿಗಳ ಕಣ್ಣೀರು - festival celebration

ಸಗಣಿ ಎರೆಚಾಟದ(ಗೊರೆಹಬ್ಬ) ಸಂಭ್ರಮದ ನಡುವೆ ಅಭಿಮಾನಿಯೊಬ್ಬರು ಪುನೀತ್ ರಾಜ್​ಕುಮಾರ್ ಅವರ ಶ್ರದ್ಧಾಂಜಲಿ ಫೋಟೋ ಹಿಡಿದು ಹಾರ ಹಾಕಿ ಕಂಬನಿ ಮಿಡಿದಿದ್ದಾರೆ‌.

puneeth rajkumar memory
ಪುನೀತ್ ಅಗಲಿಕೆಗೆ ಅಭಿಮಾನಿಗಳ ಕಣ್ಣೀರು
author img

By

Published : Nov 6, 2021, 7:14 PM IST

Updated : Nov 6, 2021, 8:38 PM IST

ಚಾಮರಾಜನಗರ: ತಮಿಳುನಾಡಿನ ತಾಳವಾಡಿ ಸಮೀಪದ ಗುಮಟಾಪುರದಲ್ಲಿ ಸಗಣಿ ಎರೆಚಾಟ (ಗೊರೆ ಹಬ್ಬ) ಸಂಭ್ರಮದ ನಡುವೆ ನಟ ಪುನೀತ್​ ರಾಜ್​ಕುಮಾರ್​ ಅವರ ಅಗಲಿಕೆಯನ್ನು ನೆನೆದು ಜನರು ಕಣ್ಣೀರಾದ ಘಟನೆ ನಡೆದಿದೆ.

ಪ್ರತಿವರ್ಷ ದೀಪಾವಳಿ ಮಾರನೇ ದಿನ ಗೊರೆಹಬ್ಬ ಆಚರಿಸುವ ಈ ಗ್ರಾಮದಲ್ಲಿ ಬಹುಪಾಲು ಮಂದಿ ಕನ್ನಡಿಗರೇ ಇದ್ದಾರೆ. ಸಗಣಿ ಎರೆಚಾಟದ ಸಂಭ್ರಮದ ನಡುವೆ ಅಭಿಮಾನಿಯೊಬ್ಬರು ಪುನೀತ್ ರಾಜ್​ಕುಮಾರ್ ಅವರ ಶ್ರದ್ಧಾಂಜಲಿ ಫೋಟೋ ಹಿಡಿದು ಹಾರ ಹಾಕಿ ಕಂಬನಿ ಮಿಡಿದಿದ್ದಾರೆ‌.

ಸಂಭ್ರಮದ ನಡುವೆ ಪುನೀತ್ ಅಗಲಿಕೆಗೆ ಅಭಿಮಾನಿಗಳ ಕಣ್ಣೀರು

ದಿಢೀರನೇ ನಡೆದ ಈ ಘಟನೆಯಿಂದಾಗಿ ಸಂಭ್ರಮದಲ್ಲಿದ್ದವರೆಲ್ಲರೂ ಸ್ವಲ್ಪ ಕಾಲ ಅವಾಕ್ಕಾದರು. ಬಳಿಕ ನೆಚ್ಚಿನ ನಟನನ್ನು ಕಳೆದುಕೊಂಡದ್ದನ್ನು ನೆನೆದು ಕಣ್ಣೀರಾದರು.

ಪುನೀತ್ ಅಗಲಿ ಒಂದು ವಾರ ಕಳೆದರೂ ಅಭಿಮಾನಿಗಳು ಆಘಾತದಿಂದ ಇನ್ನೂ ಹೊರಬಂದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Last Updated : Nov 6, 2021, 8:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.