ETV Bharat / state

ಗಾಜನೂರಲ್ಲಿ ಅಪ್ಪುವಿಗೆ ನಮನ.. ಕಣ್ಣೀರು ಹಾಕಿದ ಅಭಿಮಾನಿಗಳು - ಸ್ವಗ್ರಾಮ ಗಾಜನೂರಲ್ಲಿ ಅಪ್ಪುವಿಗೆ ನಮನ

ಪುನೀತ್ ರಾಜಕುಮಾರ್ ಮೊದಲ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ರಾಜಕುಮಾರ್ ಅವರ ಸ್ವಗ್ರಾಮ ಗಾಜನೂರು ಸೇರಿದಂತೆ ರಾಜ್ಯಾದ್ಯಂತ ಅಪ್ಪುಗೆ ಅಭಿಮಾನಿಗಳು ಪೂಜೆ ಸಲ್ಲಿಸಿದರು.

ಅಪ್ಪುಗೆ ನಮನ
ಅಪ್ಪುಗೆ ನಮನ
author img

By

Published : Oct 29, 2022, 5:56 PM IST

ಚಾಮರಾಜನಗರ/ದಾವಣಗೆರೆ: ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ರಾಜ್ ಕುಟುಂಬದ ಸ್ವಗ್ರಾಮವಾದ ತಮಿಳುನಾಡಿನ ಗಾಜನೂರಲ್ಲಿರುವ ರಾಜಕುಮಾರ್ ಅವರ ಮನೆಯ ಮುಂದೆ ಅಪ್ಪು ಅವರ ಬೃಹತ್ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಪೂಜೆ ಸಲ್ಲಿಸಿದರು.

ಈ ವೇಳೆ ನೆಚ್ಚಿನ ನಟನ ಕಟೌಟ್​​ಗೆ ಅಭಿಮಾನಿಗಳು ಅಡ್ಡಬಿದ್ದು ಕಣ್ಣೀರು ಹಾಕಿದರು. ಜೊತೆಗೆ, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಅಪ್ಪು ನಮನ ಕಾರ್ಯಕ್ರಮ ನಡೆಯುತ್ತಿದ್ದು, ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.

ಅಪ್ಪುಗೆ ನಮನ

ಬೆಣ್ಣೆ ನಗರಿಯಲ್ಲೂ ಅಪ್ಪು ಪುಣ್ಯಸ್ಮರಣೆ: ಅಪ್ಪು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಿಲೀಸ್ ಆದ ಗಂಧದ ಗುಡಿ ಸಿನಿಮಾಗೆ ಅಪ್ಪು ಫ್ಯಾನ್ಸ್ ಜೈ ಎಂದಿದ್ದಾರೆ. ಇಂದು ದಾವಣಗೆರೆಯ ಹಲವೆಡೆ ಅಪ್ಪು ಪುಣ್ಯಸ್ಮರಣೆ ಆಚರಿಸಲಾಯಿತು. ಗಲ್ಲಿಗಳಲ್ಲಿ ಅಭಿಮಾನಿಗಳು ಅಪ್ಪು ಫ್ಲೆಕ್ಸ್ ಹಾಕಿ ಪೂಜೆ ಮಾಡುವ ಜೊತೆಗೆ ಅನ್ನ ಸಂತರ್ಪಣೆ ಆಯೋಜನೆ ಮಾಡಿದ್ದರು.

ದಾವಣಗೆರೆಯ ಆರ್​ಟಿಓ ಕಚೇರಿ ಬಳಿ ಹಮ್ಮಿಕೊಂಡಿದ್ದ ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪು ಫೋಟೊಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಗುವೊಂದು ಎರಡು ಕೈಜೋಡಿಸಿ ನಮಿಸಿ ಗಮನ ಸೆಳೆಯಿತು.

(ಓದಿ: ಅಪ್ಪು ಮೊದಲ ಪುಣ್ಯ ಸ್ಮರಣೆ.. ಪತಿ ನೆನೆದು ಅಶ್ವಿನಿ ಪುನೀತ್​ ರಾಜ್​ ಕುಮಾರ್ ಭಾವುಕ ಟ್ವೀಟ್​)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.