ಚಾಮರಾಜನಗರ : ವನ್ಯಜೀವಿಗಳು ಮನುಷ್ಯನ ನಂಬಿಕೆಯಲ್ಲಿ ಬಲವಾಗಿ ಬೇರೂರಿವೆ. ಅವುಗಳಿಗೆ ದೇವರ ಸ್ಥಾನ ಕೊಟ್ಟಿರುವುದರಿಂದ ಕಾಡು ಉಳಿದಿದೆ ಎಂದು ಬಿಳಿ ಗಿರಿರಂಗನಾಥನ ದೇವಾಸ್ಥಾನ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಸಂತೋಷ್ ಹೇಳಿದರು.
ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ವನ್ಯಜೀವಿ ಟ್ರಸ್ಟ್ನಿಂದ ವನ್ಯಜೀಬಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿಗೂ ಗಿರಿಜನರು ಆನೆ, ಹುಲಿಯನ್ನು ದೇವರು ಎಂದುಕೊಂಡಿದ್ದಾರೆ.
ಅವರಿಗೆ ಸಮಸ್ಯೆ ಆಗುತ್ತಿರುವುದು ಕಾಡು ಹಂದಿಗಳಿಂದಷ್ಟೇ, ಕಾಡಿನ ಮಕ್ಕಳು ಪ್ರಾಣಿಗಳನ್ನು ದೇವರಾಗಿ ಕಂಡಿರುವುದಕ್ಕೆ ಕಾಡು ಬೆಳೆಯಲು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಅರಣ್ಯದ ಉಳಿವು ಮನುಷ್ಯನ ಉಳಿವಿನ ಪ್ರತಿಷ್ಠೆಯಾಗಿದೆ. ಮಾನವನ ದುರಾಸೆಯಿಂದ ಹಸಿರು ಮಾಯಾವಾಗುತ್ತಿರುವ ಪರಿಣಾಮ ಭೂಮಿಯ ಉಷ್ಣಾಂಶ ಏರಿಕೆಯಾಗುತ್ತಿದೆ. ವನ್ಯಜೀವಿ ಉಳಿವು ಹಾಗೂ ಅರಣ್ಯ ಉಳಿವಿನಿಂದ ಮಾತ್ರ ಮನುಷ್ಯನ ಉಳಿವು ಎಂದರು.
ಕಾಡಿನ ಸಂರಕ್ಷಣೆಗೆ ಸಾರ್ವಜನಿಕರು ಸಹಕಾರ ನೀಡದೇ ಅರಣ್ಯ ಉಳಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಅರಣ್ಯ ಇಲಾಖೆ ಜೊತೆ ಕೈಜೋಡಿಸಬೇಕು. ವನ್ಯಜೀವಿಗಳ ಜೊತೆಜೊತೆಯಲ್ಲಿ ಜೀವಿಸಿ ಅರಣ್ಯ ಹಾಗೂ ವನ್ಯಜೀವಿಗಳನ್ನು ದೇವರಂತೆ ಕಾಣಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಡಾ. ಸಹನಾ, ಪವಿತ್ರಾ ಮನೋಜಕುಮಾರ್ ಇನ್ನಿತರರು ಇದ್ದರು.