ETV Bharat / state

ಲಾಕ್​​ಡೌನ್ ಸಂಕಷ್ಟ: ಫ್ಲವರ್ ಡೆಕೋರೇಟರ್ ಆಗಿ ಬದಲಾದ ದೈಹಿಕ ಶಿಕ್ಷಕ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮಲ್ಲಿಗೆಹಳ್ಳಿಯ ನಿವಾಸಿ ದೈಹಿಕ ಶಿಕ್ಷಕರಾಗಿದ್ದ ರಾಜೇಶ್​ ಅವರು ಕೊರೊನಾ ಸಂಕಷ್ಟಕ್ಕೆ ಸಿಲುಕಿ ಬೆಂಗಳೂರು ತೊರೆದು ತನ್ನೂರಿನಲ್ಲಿ ಫ್ಲವರ್ ಡೆಕೋರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

PT teacher turned out to be a Flower Decorator
ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್
author img

By

Published : Jul 24, 2020, 12:37 PM IST

ಕೊಳ್ಳೇಗಾಲ: ಕೊರೊನಾ ದೇಶದ ಜನರ ಸ್ಥಿತಿಗತಿಯನ್ನೇ ಬದಲಿಸಿದೆ. ಬಹುಶಃ ಈ ರೀತಿ ಸಂದಿಗ್ಧ ಸ್ಥಿತಿ ಸಂಭವಿಸುವುದು ಎಂದು ಯಾರೂ ಉಹಿಸಿರಲಿಲ್ಲ. ಕೊರೊನಾದಿಂದ ಕೆಲಸ ಕಳೆದುಕೊಂಡವರ ಸಂಖ್ಯೆ ಅಂಕೆಗೆ ಸಿಗದಂತಾಗಿದೆ. ಹಾಗೆಯೇ ಕೆಲವರು ಮೊದಲು ಮಾಡುತ್ತಿದ್ದ ಕೆಲಸಕ್ಕೂ, ಈಗ ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲದಂತಾಗಿದೆ.

ಇವರ ಹೆಸರು ರಾಜೇಶ್​. ಕೊಳ್ಳೇಗಾಲ ಸಮೀಪದ ಯಳಂದೂರಿನ ಮಲ್ಲಿಗೆಹಳ್ಳಿಯ ನಿವಾಸಿ. ಚಿಕ್ಕ ವಯಸ್ಸಿನಿಂದಲೂ ಬಡತನದ ಸೂರಿನಲ್ಲಿ ಬೆಳೆದ ಅವರಿಗೆ ತಮ್ಮ ತಂದೆಯ ಅಕಾಲಿಕ ನಿಧನ ಬಹಳ ನೋವು ತಂದಿತು. ನಂತರ ತಾಯಿಯ ಆಸರೆಯಲ್ಲಿ ಬೆಳೆದರು. ತಂಗಿ‌ ಮತ್ತು ಅಣ್ಣನೂ ಇವರಿಗೆ ಇದ್ದಾರೆ.

PT teacher turned out to be a Flower Decorator
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಕುರಿತು ಬೋಧಿಸುತ್ತಿರುವ ರಾಜೇಶ್​

ಓದುವ ಸಮಯದಲ್ಲೇ ಮನೆ‌ಯ‌ ಜವಾಬ್ದಾರಿ‌ ಹೊರುವ ಪರಿಸ್ಥಿತಿ ಉದ್ಭವವಾಯಿತು. ಸಮಸ್ಯೆಗಳ‌ ಸರಪಳಿಯಲ್ಲೂ ಛಲ ಬಿಡದ ರಾಜೇಶ್, ಮೈಸೂರು‌ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಬಿಪಿಇಡಿ ಮತ್ತು ಎಂಪಿಇಡಿ ವ್ಯಾಸಂಗ ಮುಗಿಸಿದರು. ನಂತರ ಕೆಲವೇ ತಿಂಗಳಲ್ಲಿ ಖಾಸಗಿ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿಕೊಂಡರು.

ಕಷ್ಟಗಳ ಮೆಟ್ಟಿಲು ಹತ್ತಿದ ರಾಜೇಶ್,​​ ಬೆಂಗಳೂರಿನ ಫ್ಲೋರೆನ್ಸ್ ಪಿಯು ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಅಲ್ಲಿ ದೈಹಿಕ ಶಿಕ್ಷಣ ನಿರ್ದೇಶಕನಾಗಿ (ಶಿಕ್ಷಕ) ಕಾರ್ಯನಿರ್ವಹಿಸುತ್ತಿದ್ದರು. ಜೀವನಕ್ಕೆ ಆಸರೆಯಾಗಿದ್ದ ಈ ಉದ್ಯೋಗವನ್ನು ಈಗ ಕೊರೊನಾ ಕಿತ್ತುಕೊಂಡಿದೆ. ಕೆಲಸವಿಲ್ಲದ ಕಾರಣ, ಪದವಿ ಪಡೆದು ಶಿಕ್ಷಕರಾಗಿದ್ದ ಫ್ಲವರ್ ಡೆಕೋರೇಟರ್ ಆಗಿ ಬದಲಾಗಿದ್ದಾರೆ.

ಬಾಲಕಿಯರ ಕ್ರಿಕೆಟ್​​​ ಪಂದ್ಯದಲ್ಲಿ ಅಂಪೈರ್​​​ ಆಗಿರುವ ಶಿಕ್ಷಕ ರಾಜೇಶ್

ಮದುವೆ,‌ ಜನ್ಮದಿನ ಕಾರ್ಯಕ್ರಮ, ಶುಭ ಕಾರ್ಯಗಳಿಗೆ ಹೂ ಅಲಂಕಾರ, ಶಾಮಿಯಾನ, ದೀಪಾಲಂಕಾರ, ಬಲೂನ್ ಡೆಕೋರೇಷನ್ ಮಾಡುತ್ತಿದ್ದಾರೆ. ಕೊರೊನಾ ಕಾರಣ ಕಾಲೇಜಿಗೆ ವಾರದ ಮಟ್ಟಿಗೆ ರಜೆ ಸಿಕ್ಕಿತ್ತು. ರಜೆ ಮುಗಿಸಿ ಬರಬಹುದು ಎಂದು ಊರಿಗೆ ಬಂದೆ. ಆದರೆ, ಕೊರೊನಾ ಹೆಚ್ಚಾದಂತೆ ಸರ್ಕಾರ ಲಾಕ್​​ಡೌನ್ ಘೋಷಿಸಿತು. 2 ತಿಂಗಳು‌ ಮನೆಯಲ್ಲೇ ಇರುವ ಪರಿಸ್ಥಿತಿ ಉಂಟಾಯಿತು ಎಂದು ಈಟಿವಿ ಭಾರತಕ್ಕೆ ರಾಜೇಶ್​​​ ವಿವರಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್

ಶಿಕ್ಷಣ ಸಂಸ್ಥೆಯೂ ಕೇವಲ ಮಾರ್ಚ್‌ ತಿಂಗಳ ವೇತನ‌ ನೀಡಿತು. ಏಪ್ರಿಲ್ ತಿಂಗಳಿನಿಂದ ಸಂಬಳ ನೀಡಲೇ ಇಲ್ಲ. ಈ‌ ಬಗ್ಗೆ ವಿಚಾರಿಸಿದಾಗ ದೈಹಿಕ‌ ಶಿಕ್ಷಣ ಶಿಕ್ಷಕರಿಗೆ ವೇತನ ನೀಡುವುದಿಲ್ಲ. ಅದಾದ ಬಳಿಕ ತೀವ್ರ ಸಂಕಷ್ಟ ಎದುರಾಯಿತು. ಮನೆಯ ಕಷ್ಟಕ್ಕಾಗಿ ಇದೀಗ ಸಿಕ್ಕ ಕೂಲಿ ಕೆಲಸಗಳನ್ನು ಮಾಡುತ್ತಿದ್ದೇನೆ. ಸದ್ಯ ಫ್ಲವರ್ ಡೆಕೋರೇಟರ್ ಆಗಿ ಕೆಲಸ‌ ಮಾಡುತ್ತಿದ್ದೇನೆ. ಆದರೀಗ ಸಮಾರಂಭಗಳೂ ಕಡಿಮೆ ಎಂದು ತಮ್ಮ ಅಳಲು ತೋಡಿಕೊಂಡರು.

ಆನ್‌ಲೈನ್ ಶಿಕ್ಷಣವನ್ನು ಸರ್ಕಾರ ಜಾರಿಗೊಳಿಸಿದರೂ ದೈಹಿಕ‌ ಶಿಕ್ಷಣ ಶಿಕ್ಷಕರಿಗೆ ಉಪಯೋಗಕ್ಕೆ ಬರುವುದಿಲ್ಲ. ಬೇರೆ ವಿಷಯಗಳಿಗೆ ಅವಕಾಶ ಇದೆ. ಆ ಶಿಕ್ಷಕರಿಗೆ ಅರ್ಧವಾದರೂ ವೇತನ ಬರುತ್ತದೆ. ನಮಗೆ ಈ‌ ರೀತಿ ವೇತನ ಸೌಲಭ್ಯ ಇಲ್ಲದಿರುವುದು ನೋವಿನ ಸಂಗತಿ‌, ಇದು ಬಹಳ ಸಮಸ್ಯೆ ಎಂದ ಅವರು, ಖಾಸಗಿ‌ ಶಾಲಾ ಕಾಲೇಜಿನ ಶಿಕ್ಷಕರು ಜೀವನ ಕಷ್ಟಕರವಾಗಿದೆ. ಸರ್ಕಾರ ನಮ್ಮಂತಹವರ ಕಷ್ಟಕ್ಕೆ‌ ನೆರವಾಗಬೇಕು‌ ಎಂದು ಒತ್ತಾಯಿಸಿದ್ದಾರೆ.

ಕಾಲೇಜಿನ ಸಿಬ್ಬಂದಿಯೊಂದಿಗೆ ಶಿಕ್ಷಕ ರಾಜೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.