ETV Bharat / state

ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಚಾಮರಾಜನಗರದಲ್ಲಿ ಪ್ರತಿಭಟನೆ - ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಚಾಮರಾಜನಗರದಲ್ಲಿ ಪ್ರತಿಭಟನೆ

ಬಾಲಾಕೋಟ್ ದಾಳಿ ಕುರಿತು ಮೂರು ದಿನಗಳ ಮುಂಚೆಯೇ ಅರ್ನಾಬ್ ಅವರಿಗೆ ದಾಳಿ ವಿಚಾರ ತಿಳಿದಿತ್ತು ಎನ್ನಲಾದ ವಾಟ್ಸಪ್ ಮೆಸೇಜ್​​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

protest-in-chamarajanagar-against-journalist-arnab-goswami
ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಚಾಮರಾಜನಗರದಲ್ಲಿ ಪ್ರತಿಭಟನೆ
author img

By

Published : Jan 20, 2021, 4:42 PM IST

ಚಾಮರಾಜನಗರ: ಖಾಸಗಿ ವಾಹಿನಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ವಿರುದ್ಧ ಎಸ್​ಡಿಪಿಐ ಸಂಘಟನೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಲಾರಿ ಸ್ಟಾಂಡ್​​ನಿಂದ ಭುವನೇಶ್ವರಿ ವೃತ್ತದತನಕ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ರಾಷ್ಟ್ರದ ಭದ್ರತೆ ಬಗ್ಗೆ ಕಳವಳ ಪಡುವಂತಹ ಸ್ಥಿತಿ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.

ಅರ್ನಾಬ್ ಗೋಸ್ವಾಮಿ ವಿರುದ್ಧ ಎಸ್​ಡಿಪಿಐ ಸಂಘಟನೆಯಿಂದ ಪ್ರತಿಭಟನೆ

ತೀರಾ ಗೌಪ್ಯವಾಗಿರಬೇಕಿದ್ದ ಸೇನಾ ದಾಳಿ ಮಾಹಿತಿಯು ವ್ಯವಸ್ಥೆಯ ಹೊರಗಿನ ವ್ಯಕ್ತಿಗೆ ತಿಳಿಸಿರುವುದು ಕೇಂದ್ರ ಸರ್ಕಾರದ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದರು. ಅರ್ನಾಬ್ ಗೋಸ್ವಾಮಿ ಅವರನ್ನು ನ್ಯಾಯಾಂಗದ ಮುಂದೆ ತಂದು ದೇಶದ ಭದ್ರತೆ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ ಎಂಬುದನ್ನು ಮೋದಿ ಸರ್ಕಾರ ಸಾಬೀತುಪಡಿಸಲಿ ಎಂದು ಒತ್ತಾಯಿಸಿದರು. ನಂತರ ಗೋಸ್ವಾಮಿ ಚಿತ್ರಗಳಿಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದರು‌.

ಓದಿ: ಏರ್ ರೈಫಲ್ ಪಂದ್ಯಾವಳಿಯಲ್ಲಿ 3 ಚಿನ್ನದ ಪದಕ ಗೆದ್ದ ಚಾಮರಾಜನಗರದ ಶೂಟರ್

ಬಾಲಾಕೋಟ್ ದಾಳಿ ಕುರಿತು ಮೂರು ದಿನಗಳ ಮುಂಚೆಯೇ ಅರ್ನಾಬ್ ಅವರಿಗೆ ದಾಳಿ ವಿಚಾರ ತಿಳಿದಿತ್ತು ಎನ್ನಲಾದ ವಾಟ್ಸಪ್ ಮೆಸೇಜ್​​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದರಿಂದ ಎಲ್ಲೆಡೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.