ETV Bharat / state

ಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ಟ್ಯಾಂಕ್ ಏರಿದ ರೈತರಿಂದ ಆತ್ಮಹತ್ಯೆ ಎಚ್ಚರಿಕೆ - etv bharat kannda

ಹಣ ಜಮೆ ಮಾಡಲು ವಿಳಂಬವಾದ ಹಿನ್ನೆಲೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ.

protest-against-delay-in-depositing-turmeric-money-in-gundlupet
ಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ಟ್ಯಾಂಕ್ ಏರಿದ ರೈತರಿಂದ ಆತ್ಮಹತ್ಯೆ ಎಚ್ಚರಿಕೆ
author img

By

Published : Jul 26, 2023, 9:59 PM IST

ಚಾಮರಾಜನಗರ: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣದ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ವಿಳಂಬ ಧೋರಣೆಯಿಂದ ಕುಪಿತಗೊಂಡ ರೈತರು ಗುಂಡ್ಲುಪೇಟೆ ಎಪಿಎಂಸಿ ಬಳಿ ಪ್ರತಿಭಟನೆ ನಡೆಸಿದರು.

ಹಣ ಜಮೆ ಮಾಡಲು ವಿಳಂಬವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ರೈತರು ಪಟ್ಟು ಹಿಡಿದರು. ಅಷ್ಟೇ ಅಲ್ಲ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮಿರಮಿಸುವುದಿಲ್ಲ ಎಂದು ಪಟ್ಟು ಹಿಡಿದ ಅರಿಶಿಣ ಬೆಳೆಗಾರರು ಪ್ರತಿಭಟನಾ ಧರಣಿ ನಡೆಸಿದರು. ಈ ವೇಳೆ, ಚಾಮರಾಜನಗರದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲೇಬೇಕು ಎಂದು ಮಾದಪ್ಪ ಹಾಗೂ ಬಸವರಾಜು ಎಂಬವರು ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದು, ಡಿಸಿ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾರ್ನಿಂಗ್​ ಕೂಡಾ ಕೊಟ್ಟಿದ್ದಾರೆ.

ಸರ್ಕಾರ ಸ್ಥಾಪನೆ ಮಾಡಿರುವ ಖರೀದಿ ‌ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣದ ಹಣವನ್ನು ಮೂರು ದಿನಗಳ ಒಳಗೆ ರೈತರ ಬ್ಯಾಂಕ್​ ಖಾತೆಗೆ ಜಮೆ ಮಾಡಲಾಗಿರಲಿಲ್ಲ. ಯಾವಾಗ ರೈತರು ತಕ್ಷಣ ಹಣ ನಮ್ಮ ನಮ್ಮ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಡ ಹಾಕಿದ ಬಳಿಕ ಅದೂ 40 ದಿನಗಳ ಬಳಿಕ ಈಗ ಹಣ ಹಾಕಲಾಗಿದೆ. ತಡವಾಗಿ ಹಣ ಹಾಕುವ ಮೂಲಕ ಸಹಕಾರ ಮಂಡಳಿ ಹಾಗೂ ಅಧಿಕಾರಿಗಳು ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಧರಣಿ ನಿರತ ಅರಿಶಿಣ ಬೆಳೆಗಾರರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ‌.

ರೈತರು ಅರಿಶಿಣ ಖರೀದಿ ಸಂದರ್ಭದಲ್ಲೂ ಪ್ರತಿಭಟನೆ ಮಾಡಿಯೇ ಖರೀದಿಸುವಂತೆ ಮಾಡಿದ್ದಾರೆ. ಇದಾದ ಬಳಿಕ ಅರಿಶಿಣದ ಹಣ ಖಾತೆಗೆ ಜಮೆ ಮಾಡಲು ಸಹ ನಾವೆಲ್ಲ ಪ್ರತಿಭಟನೆ ಮಾಡಬೇಕಾಯಿತು ಎಂದು ಸಹಕಾರ ಮಂಡಳಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಹೀಗಿದ್ದಲ್ಲಿ ನಮ್ಮನ್ನು ಆಳುವ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿ, ಪ್ರತಿಯೊಂದನ್ನು ಪ್ರತಿಭಟನೆ ಹಾದಿಯ ಮೂಲಕವೇ ಪಡೆಯಬೇಕಾಗಿದೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಸಿ ಸ್ಥಳಕ್ಕೆ ಬರಬೇಕು ಹಾಗೂ ನಮ್ಮ ಸಮಸ್ಯೆ ಆಳಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಸಡಿಲಿಸುವ ಸಾಧ್ಯತೆಗಳು ಇಲ್ಲ.

ಇದನ್ನೂ ಓದಿ: ನಕಲಿ ಗೃಹ ಲಕ್ಷ್ಮಿ ಯೋಜನೆ ಸರ್ಟಿಫಿಕೇಟ್ ನೀಡುತ್ತಿದ್ದ ಸೈಬರ್ ಸೆಂಟರ್ ಮಾಲೀಕನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.