ETV Bharat / state

ದೇವಾಲಯದಲ್ಲಿ ಅರ್ಚಕರ ಹೊಡೆದಾಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

author img

By

Published : Jan 17, 2023, 11:42 AM IST

Updated : Jan 17, 2023, 12:45 PM IST

ಭಾನುವಾರ ಸಂಜೆ ಸುಮಾರು 6 ಗಂಟೆಯ ಸಮಯದಲ್ಲಿ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಕುಟುಂಬದವರ ನಡುವೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ.

Priests fight in Siddappaji temple
ತಟ್ಟೆ ಕಾಸಿಗಾಗಿ ಅರ್ಚಕರ ಹೊಡೆದಾಟ
ಸಿಸಿಟಿವಿ ದೃಶ್ಯ

ಚಾಮರಾಜನಗರ: ತಾಲೂಕಿನ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ದೇವಾಲಯದಲ್ಲಿ ಪೂಜಾರಿಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ‌. ದೇವಾಲಯದ ಕಾಣಿಕೆ ವಿಚಾರದ ಸಲುವಾಗಿ ಅರ್ಚಕ‌ ಕುಟುಂಬಕ್ಕೆ ಸೇರಿದ ಅಣ್ಣ- ತಮ್ಮಂದಿರು ದೇವಾಲಯದಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಎರಡ್ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿಯೇ ಕ್ಷೇತ್ರ ಸಿದ್ದಪ್ಪಾಜಿ ಜಾತ್ರೆ ಹೆಸರುವಾಸಿ. ಜನವರಿ 6 ರಿಂದ 10 ರವರೆಗೆ ಅದ್ಧೂರಿಯಾಗಿ ಜಾತ್ರೆ ನಡೆದಿತ್ತು. ಜಾತ್ರೆ ಮುಗಿದರೂ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಚಿಕ್ಕಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ. ಜಾತ್ರೆಗೆ ಬಾರದ ಜನರು ಇದೀಗ ಹರಕೆ ತೀರಿಸುತ್ತಿದ್ದಾರೆ. ಈ ವೇಳೆ ಕಾಣಿಕೆ ಹಣದ ಸಂಬಂಧ ಪೂಜಾರಿಗಳು ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ದಾಯಾದಿಗಳ ನಡುವೆ ವೈಮನಸ್ಸು: ಬೊಪ್ಪೇಗೌಡನ ಪೀಠಾಧಿಪತಿ ಪುರದ ಜ್ಞಾನರಾಜೇ ಅರಸ್ ಹಾಗೂ ದಿ.ಪ್ರಭುದೇವ ರಾಜೇ ಅರಸ್ ಪುತ್ರ ಭರತರಾಜೇ ಅರಸ್ ನಡುವೆ ದೇವಾಲಯ ಆಡಳಿತ ನಿರ್ವಹಣೆ ಹಾಗೂ ಗೋಲಕ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಇತ್ತೀಚೆಗೆ ಹಳೆ ಮಠದಲ್ಲಿ ಮರದ ಸಾಮಗ್ರಿಗಳಿಗೆ ಬೆಂಕಿ ಬಿದ್ದ ವಿಚಾರವಾಗಿ ಜ್ಞಾನರಾಜೇ ಅರಸ್ ಪತ್ನಿ ಸನ್ಮತಿ ಎಂಬುವರು ಈ ಘಟನೆಗೆ ಭರತರಾಜೇ ಅರಸ್ ಹಾಗೂ ಸಂಗಡಿಗರು ಕಾರಣ ಎಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭರತ ರಾಜೇ ಅರಸ್ ಕೂಡ ಜ್ಞಾನ ರಾಜೇ ಅರಸ್ ಮೇಲೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದರು. ಇದರಿಂದ ಈ ಎರಡು ಗುಂಪುಗಳ ನಡುವೆ ಅಸಮಾಧಾನ ಏರ್ಪಟ್ಟಿತ್ತು.

ಅಷ್ಟರಲ್ಲಿ ಜಾತ್ರೆ ಬಂದಿದೆ. ಜಾತ್ರೆ ನಡೆಸುವ ಸಂಬಂಧ ಜಿಲ್ಲಾಡಳಿತ ಹಾಗೂ ಶಾಸಕ ಆರ್.ನರೇಂದ್ರ ಹಾಗೂ ಜ್ಞಾನರಾಜೇ ಅರಸ್ ಹಾಗೂ ಭರತರಾಜೇ ಅರಸ್ ಕುಟುಂಬದ ಜತೆ ಸಭೆ ನಡೆಸಿದ್ದರು. ನಿಮ್ಮ ಕುಟುಂಬದ ಕಲಹದಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಾತ್ರೆ ನಡೆಸುವಂತೆ ಜಿಲ್ಲಾಡಳಿತ ಖಡಕ್​​ ಎಚ್ಚರಿಕೆ​ ನೀಡಿತ್ತು. ಈ ಎಲ್ಲ ಗೊಂದಲಗಳ ನಡುವೆ ಜಾತ್ರೆ ಯಶಸ್ವಿಯಾಗಿ ಮುಗೀತು ಎನ್ನುವಷ್ಟರಲ್ಲಿ ಅರ್ಚಕರ ಗಲಾಟೆ ಭಕ್ತರಲ್ಲಿ ಬೇಸರ ಮೂಡಿಸಿದೆ.

ಯಾರ ನಡುವೆ ಗಲಾಟೆ?: ಅರ್ಚಕ ಕುಮಾರ್ ಹಾಗೂ ಮತ್ತೊಬ್ಬ ಅರ್ಚಕ ಶಿವಮೂರ್ತಿ ಅವರ ತಂದೆ ಶಂಕರಪ್ಪ ಹಾಗೂ ಮಗ ಮಹೇಶ್ ಅಲಿಯಾಸ್ ಬಾಲಾಜಿ ನಡುವೆ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸಿಬ್ಬಂದಿ ಜಗಳ ಬಿಡಿಸಿದ್ದಾರೆ. "ಅರ್ಚಕರ ನಡುವೆ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದೆ. ಆದರೆ ಯಾವ ಕಾರಣಕ್ಕೆ ಗೊತ್ತಿಲ್ಲ. ಗಲಾಟೆ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ತಿಳಿದಿಲ್ಲ. ದೇವಾಲಯದಲ್ಲಿ ಗಲಾಟೆ ಮಾಡುವುದು ತಪ್ಪು. ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಕ್ಷೇತ್ರದ ಆಡಳಿದ ಮಂಡಳಿಯ ಸನ್ಮತಿ ಹೇಳಿದ್ದಾರೆ.

ಇದನ್ನೂ ಓದಿ: ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅರ್ಚಕರ ಒಕ್ಕೂಟದಿಂದ ಸಚಿವೆಗೆ ಮನವಿ ಪತ್ರ

Last Updated : Jan 17, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.