ETV Bharat / state

ಚಾಮರಾಜನಗರ: 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ! ವಿಡಿಯೋ.. - ಚಾಮರಾಜನಗರದಲ್ಲಿ ಕತ್ತು ಕಚ್ಚಿ ಕುರಿ ರಕ್ತ ಕುಡಿದ ಪೂಜಾರಿ

ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಜಾತ್ರೆಯೊಂದರಲ್ಲಿ ಅರ್ಚಕರೊಬ್ಬರು 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಘಟನೆ ಕಂಡು ಬಂದಿದೆ.

priest consuming sheep blood in Doddamma tayi fair, priest bite and consuming sheep blood in Chamarajanagar, Chamarajanagar Doddamma tayi fair news, ದೊಡ್ಡಮ್ಮ ತಾಯಿ ಜಾತ್ರೆಯಲ್ಲಿ ಕುರಿ ರಕ್ತ ಸೇವಿಸಿದ ಪೂಜಾರಿ, ಚಾಮರಾಜನಗರದಲ್ಲಿ ಕತ್ತು ಕಚ್ಚಿ ಕುರಿ ರಕ್ತ ಕುಡಿದ ಪೂಜಾರಿ, ಚಾಮರಾಜನಗರ ದೊಡ್ಡಮ್ಮ ತಾಯಿ ಜಾತ್ರೆ ಸುದ್ದಿ,
20 ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ
author img

By

Published : Mar 19, 2022, 6:57 AM IST

ಚಾಮರಾಜನಗರ: ಜಾತ್ರೆಯಲ್ಲಿ ಕುರಿಗಳ ರಕ್ತವನ್ನು ಕುಡಿದು ದೇವರನ್ನು ಸಂಪ್ರೀತಗೊಳಿಸಿದ ವಿಲಕ್ಷಣ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

20 ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ

ಪ್ರತಿ ಪಾಲ್ಗುಣ ಮಾಸದಲ್ಲಿ ನಡೆಯುವ ಗ್ರಾಮದ ದೊಡ್ಡಮ್ಮತಾಯಿ ಜಾತ್ರೆಯಲ್ಲಿ ಕುರಿ ರಕ್ತ ಕುಡಿಯುವ ಸಂಪ್ರದಾಯ ನಡೆಯುತ್ತದೆ. ಅದೇ ರೀತಿ ನಿನ್ನೆ ರಾತ್ರಿ ನಡೆದ ಜಾತ್ರೆಯಲ್ಲಿ ಅರ್ಚಕ ಕುರಿ ರಕ್ತ ಕುಡಿದಿದ್ದಾರೆ. ಈಗ ಈ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ವಿಡಿಯೋದಲ್ಲಿ ಅರ್ಚಕ ಮಾದಶೆಟ್ಟಿ 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದಿದ್ದಾರೆ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ.

ಓದಿ: ವರ್ಲ್ಡ್​ ಹ್ಯಾಪಿನೆಸ್​ ಪಟ್ಟಿ: ಫಿನ್​ಲ್ಯಾಂಡ್​ ಅತ್ಯಂತ 'ಸುಖಿ ದೇಶ', ಅಫ್ಘಾನಿಸ್ತಾನ 'ಅತೃಪ್ತಿಕರ' ದೇಶ

ದೊಡ್ಡಮ್ಮತಾಯಿ ರಥದಲ್ಲಿ ನಿಂತಿರುವ ಅರ್ಚಕನಿಗೆ ಅಲ್ಲೇ ಬಲಿಕೊಟ್ಟ ಕುರಿಯನ್ನು ನೀಡಿದಾಗ ಹಲ್ಲಿನಿಂದ ಕಚ್ಚಿ ರಕ್ತ ಸೇವಿಸಿದ್ದಾರೆ. ಈ ರೀತಿ ಮಾಡುವುದರಿಂದ ದೇವರನ್ನು ಸಂತೃಪ್ತಿಗೊಳಿಸಿದ ಹಾಗೆ ಎಂಬುದು ಭಕ್ತಾಧಿಗಳ ನಂಬಿಕೆಯಾಗಿದೆ.

ಹರಕೆ ಹೊತ್ತ ಭಕ್ತರು ಜಾತ್ರೆ ವೇಳೆ ಪ್ರಾಣಿಗಳ ಬಲಿ ಕೊಡುವಾಗ ಅರ್ಚಕ ಪ್ರತಿ ಪ್ರಾಣಿಯನ್ನು ತನ್ನ ಹಲ್ಲಿನಿಂದ ಕಚ್ಚಿ ರಕ್ತ ಕುಡಿಯುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಬಲಿಕೊಟ್ಟ ಕುರಿಯಿಂದ ಖಾದ್ಯ ತಯಾರಿಸಿ ತಮ್ಮ - ತಮ್ಮ ಸಂಬಂಧಿಕರಿಗೆ ಉಣ ಬಡಿಸುತ್ತೇವೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಲಕ್ಷಣ ಸಂಪ್ರದಾಯವೊಂದು ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವುದು ಅಚ್ಚರಿಯೇ ಆಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.