ಚಾಮರಾಜನಗರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಿಲ್ಲಾ ಪ್ರವಾಸ ಹಿನ್ನಲೆ ರಾಷ್ಟ್ರಪತಿ ಅಂಗರಕ್ಷಕರು ಜಿಲ್ಲೆಗೆ ಆಗಮಿಸಿ ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೇ, ಪೊಲೀಸರಿಗೂ ಕೆಲ ಸೂಚನೆಗಳನ್ನು ಕೊಟ್ಟಿದ್ದಾರೆ.
ಅಂಗರಕ್ಷಕರು(PBG) ಇಂದು ವಾಯುಸೇನೆ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ಮತ್ತು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ಮೂರು - ನಾಲ್ಕು ಬಾರಿ ಹಾರಾಟ ನಡೆಸಿದ್ದಾರೆ.

ಈಗಾಗಲೇ ಚಾಮರಾಜನಗರ ಮೆಡಿಕಲ್ ಕಾಲೇಜು ಮತ್ತು ಬಿಳಿಗಿರಿರಂಗನ ಬೆಟ್ಟ ಸಮೀಪ ನಿರ್ಮಾಣವಾಗಿರುವ ಹೆಲಿಪ್ಯಾಡ್ಗಳನ್ನು ಪರಿಶೀಲಿಸಿದ್ದಾರೆ. ರಸ್ತೆ ಮಾರ್ಗದಲ್ಲೂ ಸೈನಿಕರು ಟ್ರಯಲ್ ನಡೆಸಿದ್ದಾರೆ. ಬಿಳಿಗಿರಿರಂಗನಬೆಟ್ಟ ದೇವಾಲಯಕ್ಕೆ ರಾಷ್ಟ್ರಪತಿಗಳ ಖಾಸಗಿ ಭೇಟಿಯಾಗಿರುವುದರಿಂದ ಪತ್ರಕರ್ತರ ಪ್ರವೇಶಕ್ಕೆ ಅಂದು ನಿರ್ಬಂಧ ಹೇರಲಾಗಿದೆ.
ಎರಡು ದಿನ ಸಾರ್ವಜನಿಕರಿಗೆ ನಿರ್ಬಂಧ: ಚಾಮರಾಜನಗರ ಜಿಲ್ಲೆಗೆ ರಾಷ್ಟ್ರಪತಿ ಭೇಟಿ ಹಿನ್ನಲೆ ಅ.6 ಮತ್ತು 7 ರಂದು ಬಿಳಿಗಿರಿರಂಗನಬೆಟ್ಟಕ್ಕೆ ಸಾರ್ವಜನಿಕರು, ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಡಿಸಿ ಆದೇಶಿಸಿದ್ದಾರೆ.
ಅ. 7 ರಂದು ವಡ್ಡಗೆರೆ ಹೆಲಿಪ್ಯಾಡ್, ಬಿಳಿಗಿರಿರಂಗನ ಬೆಟ್ಟ, ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. 15 ಕಿ.ಮೀ ವ್ಯಾಪ್ತಿಯಲ್ಲಿ ಮಾನವರಹಿತ ಏರ್ ಕ್ರಾಫ್ಟ್ ಬಳಕೆ, ಏರ್ ಬಲೂನ್ಗಳ ಹಾರಾಟ, ಬ್ಯಾನರ್ ಬಂಟಿಂಗ್ಸ್ ಅಳವಡಿಕೆಗೆ ನಿಷೇಧ ಹೇರಲಾಗಿದೆ.
ಓದಿ: ಸಾರಿಗೆ ನೌಕರರ ವೇತನ ವಿಳಂಬ: ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಹೆಚ್ಡಿಕೆ