ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಗ್ರಾಮದಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಮಕ್ಕಳ ಸಹಾಯ ವಾಣಿ ಸದಸ್ಯರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚೆಲುವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬಾಲಕಿ ಮಾತನಾಡಿ, ನನ್ನನ್ನು ಮದುವೆ ಆಗಲು ಕೇಳಿದ್ದರು. ಆದ್ರೆ ಸದ್ಯಕ್ಕೆ ಮದುವೆ ರದ್ದಾಗಿದೆ. ನನಗೆ 18 ವರ್ಷ ತುಂಬಿದ ಬಳಿಕ ಮದುವೆಯಾಗುತ್ತೇನೆ. ಒಂದು ವೇಳೆ ಮನೆಯವರು ಮದುವೆಗೆ ಸಿದ್ಧತೆ ಮಾಡಿದರೆ 1098 ಸಹಾಯವಾಣಿ ನಂಬರ್ಗೆ ಕರೆ ಮಾಡಿ ತಿಳಿಸುವುದಾಗಿ ಹೇಳಿದ್ದಾಳೆ. ಜೊತೆಗೆ ಪೋಷಕರು ಸಹ 18 ವರ್ಷ ತುಂಬಿದ ಬಳಿಕ ಮದುವೆ ಮಾಡುವುದಾಗಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ.