ETV Bharat / state

ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವಕ್ಕೆ ತಯಾರಿ: ಭಕ್ತರಿಲ್ಲದೇ ಬಿಕೋ ಎನ್ನುತ್ತಿದೆ ಶ್ರೀಕ್ಷೇತ್ರ

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಕಲ ಸಿದ್ಧತೆ ಆರಂಭವಾಗಿದೆ. ರಥವನ್ನು ಇಂದು ದೇವಳದ ಆನೆ ಉಮಾಳಿಂದ ಎಳೆಸಲಾಗಿದ್ದು, ನಾಳೆ ಆಗಮಿಕರಾದ ಕರವೀರಸ್ವಾಮಿ ಅವರು ರಥಕ್ಕೆ ಸಂಪ್ರೋಕ್ಷಣೆ ಮಾಡಿ ರಥಕ್ಕೆ ಅಲಂಕಾರ ಮಾಡುವ ಕಾರ್ಯ ಗುರುವಾರದಿಂದ ಆರಂಭವಾಗಲಿದೆ.

Malemahadeshwara Jatra Festival at chamarajanagar
ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ
author img

By

Published : Mar 10, 2021, 9:26 PM IST

ಚಾಮರಾಜನಗರ: ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಕಲ ಸಿದ್ಧತೆ ಆರಂಭವಾಗಿದ್ದು, ದೀಪಾಲಂಕಾರದಿಂದ ದೇಗುಲ ಜಗಮಗಿಸುತ್ತಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ

ರಥವನ್ನು ಇಂದು ದೇವಳದ ಆನೆ ಉಮಾಳಿಂದ ಎಳೆಸಲಾಗಿದ್ದು, ನಾಳೆ ಆಗಮಿಕರಾದ ಕರವೀರಸ್ವಾಮಿ ಅವರು ರಥಕ್ಕೆ ಸಂಪ್ರೋಕ್ಷಣೆ ಮಾಡಿ ರಥಕ್ಕೆ ಅಲಂಕಾರ ಮಾಡುವ ಕಾರ್ಯ ಗುರುವಾರದಿಂದ ಆರಂಭವಾಗಲಿದೆ. ಶಿವರಾತ್ರಿ ಜಾತ್ರೆ ಪ್ರಯುಕ್ತ ಉತ್ಸವ ಮೂರ್ತಿಯನ್ನು ಸಾಲೂರು ಮಠಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ನಾಳೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ತರಲಿದ್ದಾರೆ.

ಶಿವರಾತ್ರಿ ದಿನದಂದು ದೇವಾಲಯ ಪ್ರಾಂಗಣಕ್ಕೆ ಹೂವಿನ ಅಲಂಕಾರ ಮಾಡಲಾಗಿದ್ದು, ನಾಳೆ ಬೆಳಗ್ಗೆ ನಾಲ್ಕರ ಜಾವದಲ್ಲಿ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ. ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದರು.

ಇದನ್ನೂ ಓದಿ: ಒಂದೇ ಬಾರಿ ಮೂರು ಕರುಗಳಿಗೆ ಜನ್ಮ ನೀಡಿದ ನಾಟಿ ಹಸು

ಭಕ್ತರಿಲ್ಲದೇ ಬಿಕೋ ಎನ್ನುತ್ತಿದೆ ದೇವಾಲಯ:

ಪ್ರತಿ ಶಿವರಾತ್ರಿ ಮಹೋತ್ಸವಕ್ಕೆ 3-4 ಲಕ್ಷ ಮಂದಿ ಭಕ್ತಾದಿಗಳು ಭಾಗಿಯಾಗುತ್ತಿದ್ದರು. ಆದರೆ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ ಹೊರತುಪಡಿಸಿ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧಿಸಿರುವುದರಿಂದ ದೇವಾಲಯ ಬಿಕೋ ಎನ್ನುತ್ತಿದೆ.

ಸತ್ತೇಗಾಲ, ಕಾಮಗೆರೆ, ಕೌದಳ್ಳಿ ಹಾಗೂ ತಾಳಬೆಟ್ಟದಲ್ಲಿ ಪೊಲೀಸ್ ನಾಕಾಬಂಧಿ ಹಾಕಲಾಗಿದ್ದು, ಪಾದಯಾತ್ರೆ ಹಾಗೂ ವಾಹನಗಳಲ್ಲಿ ಬರುವ ಭಕ್ತರನ್ನು ವಾಪಸ್ ಕಳುಹಿಸಲಾಗುತ್ತಿದೆ. ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ 3-4 ಕೋಟಿ ರೂ. ನಷ್ಟವಾಗುವ ಅಂದಾಜಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.