ETV Bharat / state

ಹಿಮಾಲಯದ ಗುರು ಸ್ವಾಮಿ ರಾಮರ ನೇರ ಶಿಷ್ಯ ಪ್ರಣವನಂದ ಸ್ವಾಮೀಜಿ ನಿಧನ

author img

By

Published : Aug 16, 2022, 3:56 PM IST

Updated : Aug 16, 2022, 4:01 PM IST

ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿಶ್ವಶಾಂತಿ ನಿಕೇತನ ಆಶ್ರಮದ ಪ್ರಣವನಂದ ಸ್ವಾಮೀಜಿ ವಯೋಸಹಜವಾಗಿ ಇಂದು ನಿಧನರಾಗಿದ್ದಾರೆ.

kn_cnr_01_swamiji_av_ka10038
ಪ್ರಣವನಂದ ಸ್ವಾಮೀಜಿ

ಚಾಮರಾಜನಗರ: ಹಿಮಾಲಯದ ಗುರು, ಅಪ್ರತಿಮ ಯೋಗ ಸಾಧಕ ಸ್ವಾಮಿ ರಾಮ ಅವರ ನೇರ ಶಿಷ್ಯ, ಬಿಳಿಗಿರಿರಂಗನ ಬೆಟ್ಟದಲ್ಲಿದ್ದ ಪ್ರಣವನಂದ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ.

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿಶ್ವಶಾಂತಿ ನಿಕೇತನ ಆಶ್ರಮದಲ್ಲಿ ಕಳೆದ 18 ವರ್ಷಗಳಿಂದ ಇದ್ದು ಧ್ಯಾನ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ಶ್ರೀಗಳು ತೊಡಗಿದ್ದರು. ವಯೋಸಹಜದಿಂದ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಶ್ರೀಗಳ ಶಿಷ್ಯವೃಂದ ತಿಳಿಸಿದೆ.

ಆಧ್ಯಾತ್ಮಿಕ ನಾಯಕರಾಗಿದ್ದ ಹಿಮಾಲಯದ ಗುರು ಸ್ವಾಮಿ ರಾಮ ಅವರಿಂದ ತಮ್ಮ‌ 25ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದ ಪ್ರಣವನಂದರು ದೇಶ ಪರ್ಯಟನೆ ನಡೆಸಿ ಬಳಿಕ ಬಿಳಿಗಿರಿರಂಗನ ಬೆಟ್ಟದಲ್ಲಿದ್ದ ಸ್ವಾಮೀಜಿ ಬ್ರಹ್ಮದೇವರ ಅಣತಿಯಂತೆ ಬಿಳಿಗಿರಿರಂಗನ ಬೆಟ್ಟದಲ್ಲೇ ನೆಲೆಯೂರಿದ್ದರು. ಶ್ರೀಗಳ ಅಂತಿಮ ವಿಧಿ ವಿಧಾನ ಬುಧವಾರ ಬೆಳಗ್ಗೆ ಆಶ್ರಮದ ಆವರಣದಲ್ಲಿ ನಡೆಯಲಿದೆ ಎಂದು ಶಿಷ್ಟವೃಂದ ಮಾಹಿತಿ ನೀಡಿದೆ.

ಇದನ್ನೂ ಓದಿ:ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ನಿಧನ

Last Updated : Aug 16, 2022, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.