ETV Bharat / state

ಬೈಕ್​ನಲ್ಲಿ ಅಕ್ರಮವಾಗಿ ಪಡಿತರ ಹೊತ್ತೊಯ್ಯುವಾಗ ಪೊಲೀಸರ ದಾಳಿ, ಮೂವರ ಬಂಧನ - Police raid on illegal ration carriers in Kollegala

ಕೊಳ್ಳೇಗಾಲದ ಸುತ್ತಮುತ್ತಲಿನಲ್ಲಿ ಬಡವರಿಂದ ಪಡಿತರವನ್ನು‌ ಹೆಚ್ಚಿನ ಬೆಲೆಗೆ ಖರೀದಿಸಿ ಮಳವಳ್ಳಿ ಕಡೆಗೆ ಸಾಗಿಸಲು ದಾಸನಪುರ ಸೇತುವೆ ಮಾರ್ಗವಾಗಿ ಬೈಕ್​ಗಳಲ್ಲಿ ತೆರಳುತ್ತಿದ್ದ ಮೂವರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Police raid on illegal ration carriers in Kollegala
ಬೈಕ್ ನಲ್ಲಿ ಅಕ್ರಮವಾಗಿ ಪಡಿತರ ಹೊತ್ತೊಯ್ಯುವಾಗ ಪೊಲೀಸರ ದಾಳಿ
author img

By

Published : Jul 16, 2021, 4:35 PM IST

Updated : Jul 16, 2021, 5:11 PM IST

ಕೊಳ್ಳೇಗಾಲ: ಬಡವರಿಗಾಗಿ ಸರ್ಕಾರದಿಂದ ವಿತರಣೆಯಾಗುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ ರಾಜಾರೋಷವಾಗಿ ಬೈಕ್​ನಲ್ಲಿ ಹೊತ್ತೊಯ್ಯುತ್ತಿದ್ದ ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ಪಡಿತರ ಹೊತ್ತೊಯ್ಯುವಾಗ ಪೊಲೀಸರ ದಾಳಿ

ಮಳವಳ್ಳಿ ತಾಲ್ಲೂಕಿನ ಬಸವರಾಜು, ಕೃಷ್ಣ ಹಾಗೂ ಕೊಳ್ಳೇಗಾಲದ ಬಾಬು ಬಂಧಿತರು. ಇವರಿಂದ 8 ಮೂಟೆ ಪಡಿತರ, 3 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕೊಳ್ಳೇಗಾಲದ ಸುತ್ತಮುತ್ತಲಿನಲ್ಲಿ ಬಡವರಿಂದ ಪಡಿತರವನ್ನು‌ ಹೆಚ್ಚಿನ ಬೆಲೆಗೆ ಖರೀದಿಸಿ ಮಳವಳ್ಳಿ ಕಡೆಗೆ ಸಾಗಿಸಲು ದಾಸನಪುರ ಸೇತುವೆ ಮಾರ್ಗವಾಗಿ ಬೈಕ್​ಗಳಲ್ಲಿ ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿದ ಸಬ್ ಇನ್​ಸ್ಪೆಕ್ಟರ್ ವಿ.ಚೇತನ್ ತಮ್ಮ ತಂಡದೊಂದಿಗೆ ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Jul 16, 2021, 5:11 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.