ಚಾಮರಾಜನಗರ: ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಖದೀಮನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ನಿವಾಸಿ ಅಬ್ದುಲ್ ರೆಹಮಾನ್ (38) ಬಂಧಿತ ಆರೋಪಿ. ಕ್ಯಾಲಿಕಟ್ ರಸ್ತೆಯ ಹಳೆ ಪ್ರವಾಸಿಮಂದಿರದ ಬಳಿ ಗಿರಾಕಿಗಳಿಗೆ ಕೇರಳ ಲಾಟರಿ ಮಾರಲು ಯತ್ನಿಸುತ್ತಿದ್ದ. ಈ ವೇಳೆ ಎಸ್ಪಿ ಹಾಗೂ ಕಾನ್ಸ್ಟೆಬಲ್ ಶಿವನಂಜಪ್ಪ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 60 ಸಾವಿರ ರೂ. ಮೌಲ್ಯದ 2,100 ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.