ಚಾಮರಾಜನಗರ: ವಿಷಕಾರಿಯಾದ ಕೊಳಕಮಂಡಲ ಹಾವನ್ನು ಮತ್ತು ಅದರ 30 ಮರಿಗಳನ್ನು ರಕ್ಷಸಿ ಕಾಡಿಗೆ ಬಿಟ್ಟರುವ ಘಟನೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪದಲ್ಲಿ ನಡೆದಿದೆ.
ಉರಗ ಪ್ರೇಮಿ ಸ್ನೇಕ್ ಚಾಂಪ್ ಅವರು ರಕ್ಷಿಸಿದ್ದ ಕೊಳಕಮಂಡಲ ಹಾವನ್ನು ಡಬ್ಬಿಯಲ್ಲಿ ಹಾಕಿ ಇಟ್ಟಿದ್ದರು. ಅದು ಸುಮಾರು 30 ಮರಿಗಳನ್ನು ಹಾಕಿತ್ತು. ಈ ಎಲ್ಲ ಹಾವುಗಳನ್ನು ಕೆ.ಗುಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಸ್ನೇಕ್ ಚಾಂಪ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು 'ಈಟಿವಿ ಭಾರತ್'ನೊಂದಿಗೆ ಸ್ನೇಕ್ ಚಾಂಪ್ ಮಾತನಾಡಿ, ನನಗೆ ಇಂದು ಪೊಲೀಸ್ ಕಚೇರಿ ಸಮೀಪದಲ್ಲಿ ಕೊಳಕಮಂಡಲ ಹಾವು ಸಿಕ್ಕಿತ್ತು. ಅದು ಸುಮಾರು ಎರಡು ಗಂಟೆಯಲ್ಲೆ 30 ಮರಿಗಳನ್ನು ಹಾಕಿತ್ತು. ಈ ಹಾವುಗಳು ಅಳಿವಿನಂಚಿನಲ್ಲಿದ್ದು, ಇದು ತುಂಬಾ ವಿಷಕಾರಿಯಾದ ಹಾವಾಗಿದೆ. ಇವು ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳನ್ನು ಸುರಕ್ಷಿವಾಗಿ ಕಾಡಿಗೆ ಬಿಡಲಾಗಿದೆ ಎಂದರು.