ಚಾಮರಾಜನಗರ: ಕೋವಿಡ್-19 ಪರಿಹಾರ ನಿಧಿಗೆ ಪೊಲೀಸ್ ಪೇದೆಯೊಬ್ಬರು ಪಿಂಚಣಿ ಹಣ ಕೊಡಲು ಮುಂದಾಗಿದ್ದಾರೆ.
![Corona Relief Fund](https://etvbharatimages.akamaized.net/etvbharat/prod-images/kn-cnr-03-kovid-fund-av-7202614_13042020170539_1304f_1586777739_126.jpg)
ಕೊಳ್ಳೆಗಾಲದ ವೃತ್ತ ನಿರೀಕ್ಷಕ ಕಚೇರಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜಪ್ಪ ತಮ್ಮ ಎನ್ಪಿಎಸ್ ಖಾತೆಯಿಂದ 25 ಸಾವಿರ ರೂ. ಹಣವನ್ನು ಕಡಿತಗೊಳಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
![Corona Relief Fund](https://etvbharatimages.akamaized.net/etvbharat/prod-images/kn-cnr-03-kovid-fund-av-7202614_13042020170539_1304f_1586777739_759.jpg)
ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಮಂಜಪ್ಪ ತಿಳಿಸಿದ್ದಾರೆ. ಪೊಲೀಸ್ ಪೇದೆಯ ಮಾನವೀಯ ನಡೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.