ETV Bharat / state

ಮೃತ ಸೋಂಕಿತನಿಗೆ ಒಂದು ನಿಮಿಷ ಮೌನಾಚರಣೆ: ಅಂತ್ಯಸಂಸ್ಕಾರದಲ್ಲಿ ಚಾಮರಾಜನಗರ ಎಡಿಸಿಯೂ ಭಾಗಿ - ಪಿಎಫ್ಐ ಕಾರ್ಯಕರ್ತರಿಂದ ಮೌನಾಚರಣೆ

ಕೊರೊನಾ ಸೋಂಕಿತ ವ್ಯಕ್ತಿಯೋರ್ವನ ಅಂತ್ಯಸಂಸ್ಕಾರ ವೇಳೆ ಸಂಬಂಧಿಗಳು ದೂರದಿಂದಲೇ ಪೂಜೆ ನೆರವೇರಿಸಿದ ಬಳಿಕ ಪಿಎಫ್ಐ ಕಾರ್ಯಕರ್ತರು ಹಾಗೂ ಎಡಿಸಿ ಒಂದು ನಿಮಿಷ ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ‌.

Chamarajanagar
ಅಂತ್ಯಸಂಸ್ಕಾರದಲ್ಲಿ ಚಾಮರಾಜನಗರ ಎಡಿಸಿಯೂ ಭಾಗಿ
author img

By

Published : Jul 23, 2020, 3:55 PM IST

ಚಾಮರಾಜನಗರ: ಕೊರೊನಾ ಸೋಂಕಿತ ವ್ಯಕ್ತಿಯೋರ್ವನ ಅಂತ್ಯಸಂಸ್ಕಾರದಲ್ಲಿ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್ ಇಂದು ಪಾಲ್ಗೊಂಡು ಪಿಎಫ್ಐ ಕಾರ್ಯಕರ್ತರ ಮಾನವೀಯ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

Chamarajanagar
ಅಂತ್ಯಸಂಸ್ಕಾರದಲ್ಲಿ ಚಾಮರಾಜನಗರ ಎಡಿಸಿಯೂ ಭಾಗಿ

ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ಕೊಳ್ಳೇಗಾಲ ತಾಲೂಕಿನ ಬಸ್ತೀಪುರದ 60 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದರು. ಇವರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ಗುರುತಿಸಿರುವ ಭೂಮಿಯಲ್ಲಿ ಮಾಡಲು ಪಿಎಫ್ಐ ಕಾರ್ಯಕರ್ತರು ಹೊರಟು‌ ನಿಂತಾಗ ಇವರೊಟ್ಟಿಗೆ ಎಡಿಸಿಯೂ ಪಿಪಿಇ ಕಿಟ್ ಧರಿಸಿ ಜೊತೆಗೂಡಿ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ, ಸಂಬಂಧಿಗಳು ದೂರದಿಂದಲೇ ಪೂಜೆ ನೆರವೇರಿಸಿದ ಬಳಿಕ ಪಿಎಫ್ಐ ಕಾರ್ಯಕರ್ತರು ಹಾಗೂ ಎಡಿಸಿ ಒಂದು ನಿಮಿಷ ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ‌.

ಅಂತ್ಯಕ್ರಿಯೆಗೂ ಮುನ್ನ ಒಂದು ನಿಮಿಷ ಮೌನಾಚರಣೆ

ಈಗಾಗಲೇ ಐವರು ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಪಿಎಫ್ಐ ಕಾರ್ಯಕರ್ತರು ಗೌರವಯುತವಾಗಿ ನಡೆಸುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಇವರ ಕಾರ್ಯ ಕಂಡು ಮುಸ್ಲಿಂ ಸಮುದಾಯದ ಕೊರೊನಾ ಸೋಂಕಿತರು ಮೃತಪಟ್ಟರೇ ಸಮುದಾಯದ ಖಬರ್​ಸ್ತಾನದಲ್ಲೇ ವಿಧಿವಿಧಾನ ನೆರವೇರಿಸಿಲು ಆಯಾ ಭಾಗದ ಮುಖಂಡರು ಸಹಕರಿಸಬೇಕೆಂದು ವಕ್ಫ್ ಮಂಡಳಿ ಸೂಚಿಸಿತ್ತು.

ಇಂದು ಮೃತಪಟ್ಟ ವ್ಯಕ್ತಿ ಡಯಾಬಿಟಿಸ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಕಳೆದ 1 ವಾರದಿಂದ ICU ನಲ್ಲಿ ದಾಖಲಾಗಿದ್ದರು ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಕೊರೊನೇತರ ಕಾರಣದಿಂದ ಓರ್ವ ಸಾವನ್ನಪ್ಪಿದ್ದರೆ, ಕೊರೊನಾದಿಂದ ಮೃತಪಟ್ಟವರ ಪ್ರಕರಣ 6 ಕ್ಕೇರಿದೆ‌.‌

80 ಕಾರ್ಯಕರ್ತರು ರೆಡಿ: ಓರ್ವನ ಅಂತ್ಯಸಂಸ್ಕಾರವನ್ನು PFI ಸಂಘಟನೆಯ 6 ಮಂದಿ ಕಾರ್ಯಕರ್ತರು ನೆರವೇರಿಸಲಿದ್ದು‌, ಪ್ರಾರಂಭದಲ್ಲಿ 18 ಮಂದಿಗೆ ಆರೋಗ್ಯ ಇಲಾಖೆ ತರಬೇತಿ ನೀಡಿತ್ತು. ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ತರಬೇತಿ ಪಡೆದ ಕಾರ್ಯಕರ್ತರು ಈಗ 80 ಮಂದಿಗೆ ತರಬೇತಿ ನೀಡುವ ಮೂಲಕ ಮಾನವೀಯ ಕಾರ್ಯಕ್ಕೆ ಸ್ವಯಂ ಸೇವಕರು ಸಜ್ಜಾಗಿದ್ದಾರೆ. ಇವರಲ್ಲಿ ಪದವೀಧರರು, ಪಿಯು ಓದಿದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ. ಎಡಿಸಿ ಕೂಡ ಇಂದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರುವುದು ಸ್ವಯಂ ಸೇವಕರಿಗೆ ಆತ್ಮಸ್ಥೈರ್ಯ ತುಂಬಿದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.