ಕೊಳ್ಳೇಗಾಲ (ಚಾಮರಾಜನಗರ) : ಸಾಕು ನಾಯಿಗಳ ಸಹಾಯದಿಂದ ಉಡ ಬೇಟಿಯಾಡಿದ್ದ ತಾಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯ ರಾಶಿಬೋಳನದೊಡ್ಡಿ ಗ್ರಾಮದ ಪ್ರವೀಣ್ ಎಂಬಾತನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ರಮೇಶ್ ಎಂಬಾತನು ಪರಾರಿಯಾಗಿದ್ದಾನೆ.
ಮಹದೇಶ್ವರ ವನ್ಯಧಾಮ ಜಾಗೇರಿ ಅರಣ್ಯಪ್ರದೇಶದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಅರಣ್ಯಾಧಿಕಾರಿಗಳು ಪರೀಶೀಲಿಸುವಾಗ ಮೇ 20 ರಂದು ಪ್ರವೀಣ್ ಹಾಗೂ ರಮೇಶ್ ಎಂಬ ಆರೋಪಿಗಳು ಅಕ್ರಮವಾಗಿ ಅರಣ್ಯದೊಳಗೆ ನುಗ್ಗಿ, ಸಾಕುನಾಯಿಗಳ ಮುಖೇನ ಉಡವನ್ನು ಭೇಟೆಯಾಡಿ ಪರಾರಿಯಾಗಿರುವುದು ತಿಳಿದು ಬಂದಿದೆ.
ಈ ಕುರಿತು ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ಆರೋಪಿಗಳಿದ್ದ ಸತ್ತೇಗಾಲ ಸಮೀಪದ ಜಾಗೇರಿಯ ರಾಶಿಬೋಳನದೊಡ್ಡಿ ಬಳಿ ತೆರಳಿ, ದಾಳಿ ನಡೆಸಿದಾಗ ಓರ್ವ ಆರೋಪಿ ಸಿಕ್ಕಿಬಿದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಪರಾರಿಯಾಗಿರುವ ಮತ್ತೋರ್ವ ಆರೋಪಿಗಾಗಿ ಶೋಧಕಾರ್ಯ ಮುಂದುವರೆದಿದೆ.