ಚಾಮರಾಜನಗರ: ಮರಳು ತುಂಬಿದ್ದ ಟಿಪ್ಪರ್ಗೆ ಹಿಂಬದಿಯಿಂದ ಪ್ರವಾಸಿಗರ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಸಂಭವಿಸಿದೆ.
ಕೇರಳ ಮೂಲದ ಸುಜಿತ್ ಕೃಷ್ಣನ್ (30) ಮೃತಪಟ್ಟ ವ್ಯಕ್ತಿ. ವಿಜೇಶ್, ಜೀತು, ಸುಲೇಮಾನ್ ಹಾಗೂ ಜೋವನ್ ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಇವರೆಲ್ಲರೂ ಕೇರಳದಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಟೀ ಕುಡಿದು ಬಂದ ಟಿಪ್ಪರ್ ಚಾಲಕ ಏಕಾಏಕಿ ಬಲಗಡೆಗೆ ವಾಹನವನ್ನು ತಿರುಗಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಟಿಪ್ಪರ್ ಜೊತೆ ಚಾಲಕ ಪರಾರಿಯಾಗಿದ್ದಾನೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Gauri Lankesh Murder Case; ಆರೋಪಿ ವಿರುದ್ಧದ ಆರೋಪ ಕೈಬಿಡುವ ಹೈಕೋರ್ಟ್ ಆದೇಶ ಸುಪ್ರೀಂನಿಂದ ರದ್ದು