ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರದ ಮೂರನೇ ದಿನವಾದ ಇಂದು 18 ಬಸ್ ಸಂಚಾರ ನಡೆಸಿದ್ದು, ವಿಭಾಗಕ್ಕೆ 3 ದಿನಗಳಿಂದ ಒಂದೂವರೆ ಕೋಟಿ ರೂ. ಆದಾಯ ನಷ್ಟವಾಗಿದೆ.
ಈ ಕುರಿತು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಚಾಮರಾಜನಗರ ಡಿಪೋಗಳಿಂದ 18 ಬಸ್ ಸಂಚಾರ ನಡೆಸಿದ್ದು 23 ಸಾವಿರ ರೂ. ಕಲೆಕ್ಷನ್ ಆಗಿದೆ. ಒಒಡಿ ಮೇಲಿದ್ದ ಮೂವರು ಟಿಸಿಗಳು ಕಂಡಕ್ಷರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ನಾಲ್ವರು ಟ್ರೈನಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗದಿದ್ದರಿಂದ ಅವರುಗಳನ್ನು ಸೇವೆಯಿಂದ ವಜಾ ಮಾಡಿದ್ದು, ಉಳಿದವರಿಗೆ ನೋಟಿಸ್ ನೀಡಲಾಗಿದೆ. ನಿವೃತ್ತಿ ಹೊಂದಿದ್ದ 62 ವರ್ಷದೊಳಗಿನ 5 ಮಂದಿ ಹಾಗೂ ಅಮಾನತಿನಲ್ಲಿದ್ದ 8 ಮಂದಿ ಚಾಲಕರನ್ನು ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಶನಿವಾರದಿಂದ ಅವರು ಕರ್ತವ್ಯ ನಿರ್ವಹಿಸುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಆರ್ಸಿಬಿ - ಮುಂಬೈ ಮೊದಲ ಪಂದ್ಯ: ಗೆಲುವಿಗಾಗಿ ಅಭಿಷೇಕದ ಮೊರೆ ಹೋದ ಅಭಿಮಾನಿಗಳು