ಕೊಳ್ಳೇಗಾಲ: ಡಿವೈಡರ್ಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಎರಡೂ ಕಾಲು ಮುರಿದು ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಬಾಪುನಗರ ಬಳಿ ನಡೆದಿದೆ.
ಮದ್ದೂರು ಗ್ರಾಮದ ಕಿರಣ್ ಕುಮಾರ್ (35) ಅಪಘಾತದಲ್ಲಿ ಗಾಯಾಳು ವ್ಯಕ್ತಿ. ಈತ ತನ್ನೂರಾದ ಮದ್ದೂರು ಗ್ರಾಮದಿಂದ ಓಮ್ನಿ ಕಾರಿನಲ್ಲಿ ಕೊಳ್ಳೇಗಾಲ ಪಟ್ಟಣಕ್ಕೆ ಬರುವಾಗ ಬಾಪುನಗರ ಹೆದ್ದಾರಿಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಆತನ ಎರಡೂ ಕಾಲು ಮುರಿದಿವೆ.
ಇದನ್ನು ಓದಿ: ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್ ಡಿಕ್ಕಿ: ಮೂವರ ಸಾವು
ಕಾರಿನೊಳಗೆ ಸಿಲುಕಿಕೊಂಡಿದ್ದ ಕಿರಣ್ ಕುಮಾರ್ನನ್ನು ಹೊರ ತೆಗೆದು ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಕೆಎಸ್ಆರ್ಟಿ ಬಸ್ ಚಾಲಕ ಎಂದು ತಿಳಿದು ಬಂದಿದೆ. ಪಟ್ಟಣದ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.