ಚಾಮರಾಜನಗರ : ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಚಾಮರಾಜನಗರಕ್ಕೆ ಖಾಯಂ ಪ್ರವಾಸೋದ್ಯಮ ಅಧಿಕಾರಿ ಇಲ್ಲದೆ ನಾಲ್ಕು ವರ್ಷ ಕಳೆದಿವೆ.
ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿಯಿಲ್ಲ ಇದು ವಿಪರ್ಯಾಸವಾದರೂ ಸತ್ಯ. ಚಾಮರಾಜನಗರ ಪ್ರವಾಸೋದ್ಯಮ ಇಲಾಖೆಗೆ 2016 ಆಗಸ್ಟ್‌ರಿಂದ ಖಾಯಂ ಉಪ ನಿರ್ದೇಶಕರೇ ಇಲ್ಲದೇ ಗಡಿಜಿಲ್ಲೆ ಪ್ರವಾಸೋದ್ಯಮ ಸೊರಗುತ್ತಿದೆ. ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರದೇ ಹಾಗೆಯೇ ಉಳಿದಿವೆ. 2012ರ ಆಗಸ್ಟ್‌ನರೆಗೆ ಫಣೀಶ್, 2012-2016 ಜನಾರ್ದನ್ ಎಂಬುವರು ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಬಳಿಕ 2-3 ವರ್ಷ ಜನಾರ್ದನ್ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಿ ತಿಂಗಳಿಗೊಮ್ಮೆ ಇಲ್ಲ ಎರಡು ಬಾರಿ ಬರುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗೆ ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಹಾಗಾಗಿ, ಪ್ರವಾಸೋದ್ಯಮ ಅಭಿವೃದ್ಧಿ ನಿಂತ ನೀರಾಗಿದೆ.ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿಯಿಲ್ಲ ಚಾಮರಾಜನಗರ ಎಂದರೆ ಕೇವಲ ಬಂಡೀಪುರ, ಮಲೆಮಹದೇಶ್ವರ ಬೆಟ್ಟವಷ್ಟೇ ಅಲ್ಲ, ಹಳ್ಳಿ-ಹಳ್ಳಿಗಳಲ್ಲೂ ಪುರಾತನ ದೇಗುಲಗಳಿವೆ. ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಉತ್ಸಾಹ ತೋರಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಜೊತೆಗೆ, ಖಾಯಂ ಅಧಿಕಾರಿಯನ್ನು ನೇಮಿಸಬೇಕೆಂದು ಈ ಮೂಲಕ ಉದ್ಯೋಗಾವಕಾಶ ಕಲ್ಪಿಸಬೇಕೆಂದು ಕಾಂಗ್ರೆಸ್ ಮುಖಂಡ ಅಸ್ಗರ್ ಮುನ್ನಾ ಒತ್ತಾಯಿಸಿದರು. ಈಗಾಗಾಲೇ ಖಾಯಂ ಅಧಿಕಾರಿಯಿಲ್ಲದೇ ನಾಲ್ಕು ವರ್ಷ ಕಳೆದಿದ್ದು ಕೊರೊನಾ ಆರ್ಭಟದ ಬಳಿಕ ಪ್ರವಾಸಿಗರನ್ನು ಆಕರ್ಷಿಸಲು ಖಾಯಂ ಅಧಿಕಾರಿಯನ್ನು ನೇಮಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ.