ಚಾಮರಾಜನಗರ: ಹನೂರಿನ ಅರಣ್ಯ ಇಲಾಖೆಯ ಕಚೇರಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಾವಲಿಗಳಿವೆ. ನಿಫಾ ವೈರಸ್ ಇದೇ ಹಕ್ಕಿಗಳಿಂದ ಹರಡುತ್ತಿದ್ದು, ಇಲ್ಲಿನ ನಿವಾಸಿಗಳಲ್ಲಿ ಭಯ ಉಂಟು ಮಾಡಿದೆ.
![ಹನೂರಿನಲ್ಲಿ ಸಾವಿರಾರು ಬಾವಲಿಗಳ ವಾಸ](https://etvbharatimages.akamaized.net/etvbharat/prod-images/kn-cnr-02-bat-av-ka10038_10092021141148_1009f_1631263308_1061.jpg)
ರಾತ್ರಿ ವೇಳೆ ಮನೆಗಳ ಮೇಲೆ ಕೂರುವ ಬಾವಲಿಗಳು ಮಲ-ಮೂತ್ರ ವಿಸರ್ಜಿಸುತ್ತಿವೆ. ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಕೊರೊನಾಗೆ ತುತ್ತಾಗಿ ಹಲವು ಜನರು ಮೃತಪಟ್ಟಿದ್ದು, ಕುಟುಂಬಸ್ಥರು ಸಂಕಷ್ಟದಲ್ಲಿದ್ದಾರೆ. ಇದೀಗ ನಿಫಾ ನಿಫಾ ಜನರನ್ನು ಕಾಡುತ್ತಿದೆ. ನಿಫಾ ಭೀತಿ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದಲ್ಲಿರುವ ಬಾವಲಿಗಳನ್ನು ಇತರೆಡೆಗೆ ಸ್ಥಳಾಂತರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಡಿಎಚ್ಒ ಡಾ.ವಿಶ್ವೇಶ್ವರಯ್ಯ ಪ್ರತಿಕ್ರಿಯಿಸಿದ್ದು, ಹನೂರು ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾವಲಿಗಳು ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇದೀಗ ವಿಷಯ ತಿಳಿದಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಹಕ್ಕಿಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮವಹಿಸಲಾಗವುದು ಎಂದರು.
ಇದನ್ನೂ ಓದಿ: 12 ಸಾವಿರ ಆಟೋ ಚಾಲಕರ ಬದುಕು ಅತಂತ್ರ..DC ಪರ್ಮಿಟ್ ಆದೇಶದ ವಿರುದ್ಧ ಚಾಲಕರ ಆಕ್ರೋಶ