ಚಾಮರಾಜನಗರ: ಬಿಜೆಪಿ ರಾಷ್ಟ್ರೀಯ ನಾಯಕ, ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಸಂಸದ ವಿ. ಶ್ರೀನಿವಾಸಪ್ರಸಾದ್ ಕಂಬನಿ ಮಿಡಿದಿದ್ದಾರೆ.
ಹನೂರಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ವಿತ್ತ ಸಚಿವ, ಕಾನೂನು ಮಂತ್ರಿಯಾಗಿದ್ದ ಅರುಣ್ ಜೇಟ್ಲಿ ಅವರೊಂದಿಗೆ ಉತ್ತಮ ಒಡನಾಟವಿತ್ತು. ನಾವಿಬ್ಬರೂ ಆತ್ಮೀಯರಾಗಿದ್ದೆವು. ಅವರ ನಿಧನವಾರ್ತೆ ಕೇಳಿ ನನಗೆ ಅಘಾತವಾಯಿತು ಎಂದು ವಿ ಶ್ರೀನಿವಾಸ್ ಪ್ರಸಾದ್ ಕಂಬನಿ ಮಿಡಿದರು.
1978ರಲ್ಲಿ ಯುವಕನಾಗಿದ್ದಾಗ ನಾನು ಅವರೊಂದಿಗೆ ರಷ್ಯಾಗೆ ಹೋಗಿದ್ದೆ. ರಾಜಕಾರಣದಲ್ಲಿ ಬಹಳ ಚಾಣಕ್ಷತನ ಹೊಂದಿದ್ದ ಅವರು ಸಚಿವರಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.