ಚಾಮರಾಜನಗರ : ಬಸ್ ನಿಲ್ದಾಣದಲ್ಲಿ ನವಜಾತ ಶಿಶುವೊಂದನ್ನು ಬ್ಯಾಗ್ನಲ್ಲಿಟ್ಟು ಪಾಲಕರು ನಾಪತ್ತೆಯಾಗಿರುವ ಘಟನೆ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದಿದೆ. ಬ್ಯಾಗ್ವೊಂದರಲ್ಲಿ ತಮಗೆ ಬೇಡವಾದ ಮಗುವನ್ನು ಇಟ್ಟು ಹೋಗಿದ್ದು, ಬ್ಯಾಗ್ ಬಳಿ ಯಾರೂ ಇಲ್ಲದ್ದನ್ನು ಗಮನಿಸಿದ ಸಾರ್ವಜನಿಕರು ಬ್ಯಾಗ್ ತೆರೆದು ನೋಡಿದಾಗ 7 ದಿನದ ಗಂಡು ಮಗು ಇರುವುದು ಪತ್ತೆಯಾಗಿದೆ.
ಹನೂರು ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿ ಬ್ಯಾಗ್ ಸಮೇತ ಮಗುವನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಇನ್ನು, ಈ ಮುದ್ದಾದ ಮಗುವನ್ನು ಸಾಕಲು ನಾಲ್ಕೈದು ಮಂದಿ ಮುಂದೆ ಬಂದಿದ್ದು, ತಮಗೇ ಶಿಶುವನ್ನು ಕೊಡಬೇಕೆಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಅನೈತಿಕ ಸಂಬಂಧದಿಂದ ಮಗು ಜನಿಸಿದ್ದರಿಂದ ಮರ್ಯಾದೆಗೆ ಅಂಜಿ ಮಗುವನ್ನು ತೊರೆದಿರಬೇಕು ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರು : ಸ್ಕೂಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ, ಸವಾರ ಸಾವು