ಕೊಳ್ಳೇಗಾಲ: ನೇಪಾಳದ ಯುವಕನೋರ್ವ ಕೊಳ್ಳೇಗಾಲದ ಓಂಶಕ್ತಿ ದೇಗುಲ ಸಮೀಪದ ಚಿಲ್ಲರೆ ಅಂಗಡಿ ಮುಂದೆ ನೇಣಿಗೆ ಶರಣಾದ ಘಟನೆ ನಡೆದಿದೆ.
ನೇಪಾಳ ದೇಶದ ಯುವಕ ಅತಿನ್ ಖಡ್ಕ (28) ಮೃತ ದುರ್ದೈವಿ.
ಚಿಲ್ಲರೆ ಅಂಗಡಿಯ ಮುಂಭಾಗದ ಕಬ್ಬಿಣದ ಕೊಕ್ಕೆಗೆ ಪ್ಲಾಸ್ಟಿಕ್ ವೈರ್‍ನಿಂದ ನೇಣುಬಿಗಿದುಕೊಂಡಿದ್ದು, ಮೃತನ ಪ್ಯಾಂಟ್ ಜೇಬಿನಲ್ಲಿ ದೊರೆತ ಪಾಸ್‍ಪೋರ್ಟ್‍ನಿಂದ ಹೆಸರು, ವಿಳಾಸ ತಿಳಿದು ಬಂದಿದೆ.
'ಮೈ ಲೈಫ್ ಇಸ್ ಎಂಡ್, ಮೈ ಲೈಪ್ ಇಸ್ ಗಾನ್' ಎಂದು ಬರೆದ ಚೀಟಿಯೂ ದೊರೆತಿದೆ. ಸುರಕ್ಷತೆ ಕಾರಣದಿಂದ ಶವವನ್ನು ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿಡಿಲಾಗಿದ್ದು, ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.