ಚಾಮರಾಜನಗರ: ಆಟವಾಡುತ್ತಾ ಸ್ನೇಹಿತರು, ಪಾಲಕರ ಜೊತೆ ಅರಳು ಹುರಿದಂತೆ ಮಾತನಾಡಬೇಕಾದ ಪುಟ್ಟ ಬಾಲಕಿಯೊಬ್ಬಳು ವಿಧಿಯಾಟದಿಂದ ಮಾತು, ನಿಲ್ಲುವ ಶಕ್ತಿ ಕಳೆದುಕೊಂಡಿದ್ದಾಳೆ. ಮಗಳ ಸಮಸ್ಯೆ ಬಗೆಹರಿಸಲು ತಂದೆ - ತಾಯಿ ನಿತ್ಯ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಜೊತೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಎಂಬಾಕೆ ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದಾಳೆ. ಸೂಕ್ತ ವೈದ್ಯಕೀಯ ನೆರವು ಸಿಕ್ಕರೆ ಎಲ್ಲರಂತೆ ನಮ್ಮ ಮಗಳು ಕೂಡ ಮಾತನಾಡುತ್ತಾಳೆ ಎಂಬ ನಿರೀಕ್ಷೆಯನ್ನ ಪೋಷಕರು ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಏನು ?: ಮಗು ಜನಿಸಿದ ವೇಳೆ ಮೆದುಳಿಗೆ ಪೆಟ್ಟಾಗಿದ್ದು, ಹುಟ್ಟಿದಾಗಲೂ ಅಳಲಿಲ್ಲವಂತೆ. ಎರಡು ವರ್ಷದ ತನಕ ಕುಳಿತುಕೊಳ್ಳಲು ಶಕ್ತಿ ಇರಲಿಲ್ಲ. ಸತತ ವೈದ್ಯಕೀಯ ಚಿಕಿತ್ಸೆ ಬಳಿಕ ಎರಡು ವರ್ಷಕ್ಕೆ ಮಗು ಕುಳಿತುಕೊಳ್ಳಲು ಆರಂಭಿಸಿದ್ದು, 5ನೇ ವರ್ಷಕ್ಕೆ ಈಗೀಗ ಮಾತು ಆಡಲು ಪ್ರಾರಂಭಿಸಿದ್ದಾಳೆ.
ನಿರಂತರ ಚಿಕಿತ್ಸೆ ಕೊಡಿಸಿದ್ರೆ ಸ್ನೇಹಾ ಗುಣಮುಖಳಾಗುತ್ತಾಳೆ ಅಂತಾ ಆಯುಷ್ ವೈದ್ಯರು ಭರವಸೆ ನೀಡಿದ್ದಾರೆ. ಎಸ್ಬಿಐ ಗ್ರಾಹಕರ ಸೇವಾ ಕೇಂದ್ರದಲ್ಲಿ ನಾನು ಕೆಲಸ ನಿರ್ವಹಿಸುತ್ತಿದ್ದು ಶಕ್ತಿ ಮೀರಿ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಸಂಘ - ಸಂಸ್ಥೆಗಳು, ಜನಪ್ರತಿನಿಧಿಗಳು, ದಾನಿಗಳು ನೆರವಿನ ಹಸ್ತ ಚಾಚಿದರೆ ತನ್ನ ಮಗಳು ಎಲ್ಲರಂತೆ ಆಗಲಿದ್ದಾಳೆ ಎಂದು ಬಾಲಕಿಯ ತಂದೆ ಸಿದ್ದಯ್ಯ ಮನವಿ ಮಾಡಿದ್ದಾರೆ.
ಬ್ಯಾಂಕ್ ವಿವರ: Siddaiah, SBI A/C 39202413308. IFSC- SBIN0040079. terakanambi branch. Phone-9743780749
ಇದನ್ನೂ ಓದಿ: ತಮ್ಮನನ್ನು ಮಡಿಲಲ್ಲಿಟ್ಟುಕೊಂಡೇ ಪಾಠ ಕೇಳುವ ಪುಟ್ಟ ಬಾಲಕಿ: ಶಿಕ್ಷಣದ ಮಹತ್ವ ತಿಳಿಯಲು ಈಕೆಯೇ ಸೂಕ್ತ