ETV Bharat / state

ಸಂವಿಧಾನ‌ ಪ್ರತಿಯೊಬ್ಬ ಭಾರತೀಯನ ಕನಸು, ನನಸುಗಳ ಕನ್ನಡಿ: ಸಂಸದ ವಿ.ಶ್ರೀನಿವಾಸ್ ಪ್ರಸಾದ್ - ಸಂವಿಧಾನವು ಕಾನೂನುಗಳ ದಾಖಲೆಯಲ್ಲ

ಅಂಬೇಡ್ಕರ್ ಸಂವಿಧಾನದ ಶಕ್ತಿಯಿಂದಾಗಿ ಮಳೆ ಬಂದರೇ ಮನೆಯಲ್ಲಿ ನಿಲ್ಲಲು ಜಾಗವಿಲ್ಲದ ಪರಿಸ್ಥಿತಿಯಲ್ಲಿ ಬೆಳೆದ ರಾಮನಾಥ ಕೋವಿಂದ್ ಇಂದು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ.

dsdsd
ಸಂಸದ ವಿ.ಶ್ರೀನಿವಾಸ್ ಪ್ರಸಾದ್
author img

By

Published : Mar 13, 2021, 11:33 PM IST

ಚಾಮರಾಜನಗರ: ಸಂವಿಧಾನವು ಕಾನೂನುಗಳ ದಾಖಲೆಯಲ್ಲ. ಪ್ರತಿಯೊಬ್ಬ ಭಾರತೀಯನ ಕನಸು-ನನಸುಗಳ ಕನ್ನಡಿಯಾಗಿದೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಾಖ್ಯಾನ ಮಾಡಿದ್ದಾರೆ.

ಸಂಸದ ವಿ.ಶ್ರೀನಿವಾಸ್ ಪ್ರಸಾದ್

ನಗರದಲ್ಲಿ ನಡೆದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ಓದು ಪುಸ್ತಕ ವಿತರಣೆ ಮಾಡಲು ನನಗೆ ಜಿಲ್ಲೆಯ ಹೊಂಡರಬಾಳುವಿನ ನವೋದಯ ಶಾಲೆಯ ಮಕ್ಕಳು ಮಾಡಿದ ಸಂವಿಧಾನದ ಅಣಕು ಪ್ರದರ್ಶನ ಮುಖ್ಯ ಪ್ರೇರೇಪಣೆಯಾಯಿತು. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದ ಸಂವಿಧಾನವಾಗಿದ್ದ, ಇದನ್ನು ಮಕ್ಕಳು ಓದಬೇಕು. ಸಂಸದರ ನಿಧಿಯಿಂದ 15ಲಕ್ಷ ರೂ.ವೆಚ್ಚದಲ್ಲಿ 'ಸಂವಿಧಾನ‌ ಓದು' ಪುಸ್ತಕವನ್ನು ಸಿದ್ದಪಡಿಸಿ, ಶಿಕ್ಷಣ ಸಚಿವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಿಗೆ ಹಂಚುತ್ತಿದ್ದೇವೆ ಎಂದರು.

ನಂತರ ಮಾತನಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್,​ ಸಂವಿಧಾನವನ್ನು ಹೊರತು ಪಡಿಸಿ ಯಾವುದೇ ಮಸೂದೆಯನ್ನಾಗಲಿ ಅಂಗೀಕರಿಸಲು ಸಾಧ್ಯವಿಲ್ಲ. ನ್ಯಾಯಾಧೀಶರನ್ನು ನಿಯಂತ್ರಣದಲ್ಲಿಟ್ಟುಕೊಂಡು ತಮಗೆ ಬೇಕಾದಂತೆ ತೀರ್ಪುಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಇದು ಭಾರತದ ಸಂವಿಧಾನದ ಗಟ್ಟಿತನ. ಇಡೀ ಪ್ರಪಂಚದಲ್ಲಿ ಭಾರತದಂತಹ ಸಂವಿಧಾನ‌ ಇನ್ನೊಂದಿಲ್ಲ, ಶ್ರೀಸಾಮಾನ್ಯನಿಂದ ರಾಷ್ಟಪತಿವರೆಗೆ ಎಲ್ಲರೂ ಒಂದೇ ಇದು ಸಂವಿಧಾನ‌ ನೀಡಿರುವ ಶಕ್ತಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.