ETV Bharat / state

ಸಾಂತ್ವನ ಹೇಳುವ ಯೋಗ್ಯತೆ ಇಲ್ಲ, ನಮ್​​ ಬಗ್ಗೆ ಏನ್ ಮಾತಾಡೋದು: ನಾರಾಯಣಗೌಡ ವಿರುದ್ಧ 'ಕೈ' ಶಾಸಕ ಕಿಡಿ

author img

By

Published : Jul 1, 2021, 7:37 PM IST

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಯೋಗ್ಯತೆ ಇಲ್ಲದವರು ಎಂದು ಶಾಸಕ ನಾರಾಯಣಗೌಡ ವಿರುದ್ಧ ಕಾಂಗ್ರೆಸ್​ ಶಾಸಕ ಪುಟ್ಟರಂಗಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

mla puttarangashetty statement against mla narayangowda
ಪುಟ್ಟರಂಗಶೆಟ್ಟಿ

ಚಾಮರಾಜನಗರ: ಕೆಪಿಸಿಸಿ ವತಿಯಿಂದ 36 ಜನರಿಗೆ ಒಂದೊಂದು ಲಕ್ಷವನ್ನಾದರೂ ಕೊಟ್ಟಿದ್ದೀವಿ, ಅವರೇನು ಕೊಟ್ಟಿದ್ದಾರೆ?, ಇಡೀ ರಾಜ್ಯಕ್ಕೆ ಡಿ.ಕೆ ಶಿವಕುಮಾರ್​ ದುಡ್ಡು ಕೊಡಲಿ ಎಂದು ಹೇಳಿಕೆ ನೀಡಿದ್ದ ನಾರಾಯಣಗೌಡ ವಿರುದ್ಧ ಶಾಸಕ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದರು.

ಆಹಾರ ಕಿಟ್ ವಿತರಿಸಿದ ಶಾಸಕ

ನಗರದ ಪ್ರವಾಸಿಮಂದಿರದಲ್ಲಿ ಜಾನಪದ ಕಲಾವಿದರಿಗೆ ಆಹಾರ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ರು. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಅವರಿಗೆ ಯೋಗ್ಯತೆ ಇಲ್ಲ, ನಮ್ಮ ಬಗ್ಗೆ ಅವರೇನು ಮಾತನಾಡುವುದು? ಎಂದು ಹರಿಹಾಯ್ದರು. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ ಎಲ್ಲರಿಗೂ ದುಡ್ಡು ಕೊಡುತ್ತಿದ್ದೆವು. ಕೆಪಿಸಿಸಿ ವತಿಯಿಂದ ಅಷ್ಟಾದರೂ ಕೊಟ್ಟಿದ್ದೇವೆ, ನಾರಾಯಣಗೌಡ ಏನು ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇಂದು ಜಾನಪದ ಪರಿಷತ್ತು, ನವೋದಯ ಬಳಗ, ರಂಗವಾಹಿನಿ ವತಿಯಿಂದ ಇಂದು 60 ಕ್ಕೂ ಹೆಚ್ಚು ಜಾನಪದ ಕಲಾವಿದರಿಗೆ ಆಹಾರ ಕಿಟ್ ವಿತರಿಸಲಾಯಿತು‌. ಈ ವೇಳೆ, ಎಡಿಸಿ ಕಾತ್ಯಾಯಿನಿದೇವಿ, ಜಾನಪದ ಅಕಾಡೆಮಿ ಸದಸ್ಯ ನರಸಿಂಹಮೂರ್ತಿ ಇದ್ದರು.

ಇದನ್ನೂ ಓದಿ:ದಿಕ್ಕಿಗೊಬ್ಬರಿದ್ದ ಮೂಲ ಕಾಂಗ್ರೆಸ್ಸಿಗರ ಒಗ್ಗಟ್ಟಿಗೆ ಕಾರಣವಾಯ್ತಾ 'ಸಿದ್ದು ಆಪ್ತರ ಸಿಎಂ' ಹೇಳಿಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.