ಗುಂಡ್ಲುಪೇಟೆ: ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿರುವ ಬಂಡೀಪುರದ ಕುಂದುಕೆರೆ ವಲಯಕ್ಕೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇಂದು ಸಂಜೆಯವರೆಗೆ ಹುಲಿ ಪತ್ತೆಗೆ ಆನೆಗಳ ಸಹಾಯದಿಂದ ಕೂಂಬಿಂಗ್ ನಡೆಸಿದರೂ ಸಹ ಹುಲಿ ಪತ್ತೆ ಆಗಿಲ್ಲ.
ಹುಲಿ ಭಯದಿಂದ ಜಮೀನಿನಲ್ಲಿ ಹಸುಗಳನ್ನು ಬಿಡಲು ಭಯವಾಗುತ್ತಿದೆ. ಮಳೆಯಾಗಿದೆ. ಕೃಷಿ ಚಟುವಟಿಕೆಗಳನ್ನು ಮಾಡಲು ಜಮೀನಿಗೆ ಹೋಗಲು ಭಯವಾಗುತ್ತಿದೆ. ವಾರದಿಂದ ಬೋನು ಇಟ್ಟಿದ್ದರೂ ಬೋನಿನ ಹತ್ತಿರ ಸಹ ಹುಲಿ ಬರುತ್ತಿಲ್ಲ. ಮತ್ತೆ ಹೇಗೆ ಸೆರೆಯಾಗುತ್ತದೆ. ನಮ್ಮ ಕೆಲಸ ಪ್ರಾರಂಭ ಮಾಡುವುದಾದರೂ ಯಾವಾಗ ಎಂದು ರೈತರು ಶಾಸಕರ ಮುಂದೆ ಅಳಲು ತೋಡಿಕೊಂಡರು.