ETV Bharat / state

ಮೈಸೂರಿನ ಐಎಎಸ್ ಅಧಿಕಾರಿಗಳಿಬ್ಬರಿಗೆ ಸಿಎಂ ಶಿಸ್ತು ಕಲಿಸಲಿ; ಶಾಸಕ ಮಹೇಶ್ - ಶಾಸಕ ಎನ್.ಮಹೇಶ್ ಅಕ್ರೋಶ

ಮೈಸೂರಿನ ಡಿಸಿ ಅಧಿಕಪ್ರಸಂಗತನದ ಮಾತುಗಳನ್ನು ಆಡುತ್ತಾರೆ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ.

MLA N. Mahesh
ಶಾಸಕ ಎನ್.ಮಹೇಶ್
author img

By

Published : Jun 4, 2021, 2:34 PM IST

ಕೊಳ್ಳೇಗಾಲ: ಮೈಸೂರಿನ ಇಬ್ಬರೂ ಐಎಎಸ್ ಅಧಿಕಾರಿಗಳು ಮಾಧ್ಯಮಗಳಲ್ಲಿ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಡಿಸಿ ರೋಹಿಣಿ ಸಿಂಧೂರಿ ಅಧಿಕ ಪ್ರಸಂಗತನದ ಮಾತುಗಳನ್ನು ಆಡುತ್ತಾರೆ ಎಂದು ಶಾಸಕ‌ ಎನ್. ಮಹೇಶ್ ಹೇಳಿದ್ದಾರೆ.

ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಎನ್. ಮಹೇಶ್ ಅಕ್ರೋಶ

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಡಿಸಿ ರೋಹಿಣಿ ಸಿಂಧೂರಿ ಅನೇಕ ಸಂದರ್ಭದಲ್ಲಿ ಅಧಿಕ ಪ್ರಸಂಗತನದಿಂದ ಮಾತನಾಡಿದ್ದಾರೆ. ಅಧಿಕಾರಿಗಳು ಮೊದಲು ಅಧಿಕಪ್ರಸಂಗದ ಮಾತುಗಳನ್ನು ಆಡಬಾರದು. ಮಾಧ್ಯಮಗಳ ಮುಂದೆಯೂ ಹೋಗಬಾರದು. ಕೋವಿಡ್ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಮಾಧ್ಯಮಕ್ಕೆ ಹೋಗಲಿ. ಆದರೆ ವೈಯಕ್ತಿಕ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳಲು ಮಾಧ್ಯಮಕ್ಕೆ ಹೋಗಕೂಡದು ಎಂದು ಸಲಹೆ ನೀಡಿದರು.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣ ನಡೆದ ಬಳಿಕ, ಮಾಧ್ಯಮಗಳಲ್ಲಿ ಮೈಸೂರು ಡಿಸಿ ಆರೋಪ ಮುಕ್ತ ಎಂದು ಬಂದಿತ್ತು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಚಾಮರಾಜನಗರದವರೂ ಮೈಸೂರಿನ ಜನರಿಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿಕೆ ನೀಡಿದ್ರು. ಕ್ಷಮೆ ಕೇಳಲಿಕ್ಕೆ ಇವರೇನು ಮೈಸೂರಿನ ಮಹಾರಾಜರೇ? ಎಂದು ಪ್ರಶ್ನಿಸಿದರು.

ಪಾಲಿಕೆ ಆಯುಕ್ತೆ ರಾಜೀನಾಮೆ ವಿಚಿತ್ರ:

ಡಿಸಿ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಮೈಸೂರಿನ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ಕೊಟ್ಟಿರುವುದು ವಿಚಿತ್ರ ಸಂಗತಿಯಾಗಿದೆ. ಇವೆಲ್ಲವೂ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವುದು ಇನ್ನೂ ವಿಚಿತ್ರ. ಇಂತಹ ಅಧಿಕಾರಿಗಳಿಗೆ ಶಿಸ್ತು ಇಲ್ವಾ? ಮಾಧ್ಯಮಗಳ ಮುಂದೆ ಯಾಕೆ ಹೋಗಬೇಕಿತ್ತು. ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇಬ್ಬರೂ ಅಧಿಕಾರಿಗಳಿಗೆ ಬುದ್ದಿ ಹೇಳಬೇಕು. ಇನ್ಮುಂದೆ ಯಾವ ಜಿಲ್ಲೆಯಲ್ಲೂ ಈ ರೀತಿ ಘಟನೆ ಮರುಕಳಿಸಬಾರದು ಎಂದರು.

ಓದಿ: ಶಿಲ್ಪಾನಾಗ್​ ಪರ ಬೀದಿಗಿಳಿದ ಮೈಸೂರು ಮಹಾನಗರ ಪಾಲಿಕೆ ಸದಸ್ಯರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.