ETV Bharat / state

ನಂಬಿದವರನ್ನು ಕೈಬಿಟ್ಟಿಲ್ಲ, ಅರ್ಜುನನಾಗಿದ್ದವರು ಈಗ ಕೃಷ್ಣನಾಗಿದ್ದಾರೆ.. ಸ್ವಾಮೀಜಿಗಳ ಜತೆ ಬಿಎಸ್‌ವೈಗೆ ಎನ್‌ ಮಹೇಶ್ ಬಹುಪರಾಕ್‌ - MLA mahesh, who praised Yeddyurappa

ಯಡಿಯೂರಪ್ಪನವರನ್ನು ನಂಬಿದವರು ಯಾರೂ ಹಾಳಾಗಿಲ್ಲ, ಅವರನ್ನು ನಂಬಿದವರಿಗೆ ದಡ ಮುಟ್ಟಿಸಿದ್ದಾರೆ, ನಂಬಿದವರನ್ನು ಯಡಿಯೂರಪ್ಪ ಎಂದಿಗೂ ಕೈ ಬಿಟ್ಟಿಲ್ಲ ಎಂದು ಶಾಸಕ ಎನ್ ಮಹೇಶ್ ಅವರು ಬಿಎಸ್ ವೈ ಗುಣಗಾನ ಮಾಡಿದ್ದಾರೆ..

mla mahesh spoke about B. S. Yediyurappa
ನಂಬಿದವರನ್ನು ಕೈಬಿಟ್ಟಿಲ್ಲ, ಅರ್ಜುನನಾಗಿದ್ದವರು ಈಗ ಕೃಷ್ಣರಾಗಿದ್ದಾರೆ: ಮಹೇಶ್ ಹೀಗಂದಿದ್ದು ಯಾರಿಗೆ...?
author img

By

Published : Mar 30, 2022, 5:51 PM IST

Updated : Mar 30, 2022, 7:06 PM IST

ಚಾಮರಾಜನಗರ : ಈ ಹಿಂದೆ ಅರ್ಜುನನಾಗಿ ಹೋರಾಡಿದ್ದ ಬಿ.ಎಸ್.‌ಯಡಿಯೂರಪ್ಪ ಇನ್ಮುಂದೆ ಕೃಷ್ಣನ ರೀತಿ ಸಾರಥಿಯಾಗುತ್ತಾರೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದ್ದಾರೆ. ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ವಿರಕ್ತ ಮಠದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಜುನನ ರೀತಿ ಇದ್ದ ಯಡಿಯೂರಪ್ಪ ಕೃಷ್ಣನ ರೀತಿ ಸಾರಥಿಯಾಗಿ ಪಕ್ಷವನ್ನು ಮುನ್ನಡೆಸಿ ಚುನಾವಣೆ ಎದುರಿಸಲಿದ್ದಾರೆ ಎಂದರು.

ಯಡಿಯೂರಪ್ಪನವರನ್ನು ನಂಬಿದವರು ಯಾರೂ ಹಾಳಾಗಿಲ್ಲ. ಅವರನ್ನು ನಂಬಿದವರಿಗೆ ದಡ ಮುಟ್ಟಿಸಿದ್ದಾರೆ, ನಂಬಿದವರನ್ನು ಯಡಿಯೂರಪ್ಪ ಎಂದಿಗೂ ಕೈ ಬಿಟ್ಟಿಲ್ಲ ಎಂದು ಬಿಎಸ್‌ವೈ ಗುಣಗಾನ ಮಾಡಿದ್ದಾರೆ. ಯಡಿಯೂರಪ್ಪನವರಂತ ಸಂವೇದನಾ ಶೀಲ ನಾಯಕನನ್ನು ನಾನು ನೋಡಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.

ಬಿಎಸ್‌ವೈಯನ್ನು ಹೊಗಳಿದ ಶಾಸಕ ಎನ್‌ ಮಹೇಶ್

ಮೌನವಾಗಿಯೇ ಇರುವ ಯಡಿಯೂರಪ್ಪ ಜನಾನುರಾಗಿಯಾಗಿ ಕೆಲಸ ಮಾಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ಯಡಿಯೂರಪ್ಪ ಅವರ ಜನಪ್ರಿಯತೆ ಕುಗ್ಗಿಲ್ಲ. ಯಡಿಯೂರಪ್ಪ ಅವರದು ಒಂದು ರೀತಿ ಮಾತೃ ಹೃದಯ. ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿ ಚಾಮರಾಜನಗರ ಜನರು ಅನ್ನ ತಿನ್ನುವಂತೆ ಮಾಡಿರುವುದಾಗಿ ಹೇಳಿದರು.

ರಾಜಾಹುಲಿಗೆ ಖಾವಿಗಳ ಜೈಕಾರ : ಇನ್ನು, ವಿರಕ್ತ ಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹತ್ತಾರು ಮಠಾದೀಶರು ಯಡಿಯೂರಪ್ಪನವರನ್ನು ಗುಣಗಾನ ಮಾಡಿ ಅವರ ಅಧಿಕಾರವಧಿಯನ್ನು ಹಾಡಿ ಹೊಗಳಿದರು. ವಾಟಾಳು ಮಠದ ಶ್ರೀ ಮಾತನಾಡಿ, ಯಡಿಯೂರಪ್ಪ ಅವರಿಗೆ ಶಕ್ತಿ ಇನ್ನೂ ಕುಂದಿಲ್ಲ. ಇನ್ನೂ ಎರಡು ಅವಧಿಗೆ ಮುಖ್ಯಮಂತ್ರಿಯಾಗುವ ಶಕ್ತಿ ಅವರಲ್ಲಿದೆ ಎಂದರು‌‌.

ಮಠ-ಮಾನ್ಯಗಳಿಗೆ ನೆರವನ್ನು ಪ್ರಸ್ತಾಪಿಸಿದ ಹಲವಾರು ಮಠಾಧೀಶರು ಯಡಿಯೂರಪ್ಪ ನಡೆಯಿಂದ ಮಠಗಳು ಉಳಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಮಠಗಳು ಸಮಾಜದ ಬೆಳವಣಿಗೆಗೆ ಅವಶ್ಯಕತೆ ಅಲ್ಲ ಅದು ಅಗತ್ಯತೆ ಎಂಬುದನ್ನು ಸಾರಿದರು ಎಂದು ಸ್ವಾಮೀಜಿಗಳು ಯಡಿಯೂರಪ್ಪನವರನ್ನು ಗುಣಗಾನ ಮಾಡಿದರು.

ಬಳಿಕ ಸುತ್ತೂರು ಶ್ರೀ ಮಾತನಾಡಿ, ಕಾವೇರಿ ನ್ಯಾಯಾಧೀಕರಣದಲ್ಲಿ ಪ್ರಕರಣ ಇದ್ದಾಗಲೇ ಕೆರೆಗೆ ನೀರು ತುಂಬುವ ಯೋಜನೆ ಜಾರಿಗೊಳಿಸಿ ಲಕ್ಷಾಂತರ ರೈತರ ಬಾಳಿಗೆ ಆಶಾಕಿರಣವಾದರು. ಸಿಎಂ ಆಗುವ ಮುನ್ನ ಇದ್ದ ಜನಪ್ರಿಯತೆ, ಸಿಎಂ ಆದಾಗಿನ ಜನಪ್ರಿಯತೆ, ಅಧಿಕಾರದಿಂದ ಇಳಿದ ಬಳಿಕವೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದು ಹೇಳಿದರು.

ಓದಿ :ಡ್ರಗ್ಸ್ ಕೇಸ್: ಬೆಂಗಳೂರಿನಲ್ಲಿ ಮಂಗಳೂರಿನ‌‌ ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರು ಅರೆಸ್ಟ್

Last Updated : Mar 30, 2022, 7:06 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.