ಚಾಮರಾಜನಗರ: ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಬೈಕ್ ಸೇರಿದಂತೆ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಮಡಹಳ್ಳಿ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ನಿರ್ಮಲ ಕಾನ್ವೆಂಟ್ನ 8ನೇ ತರಗತಿ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (14) ಮೃತ ವಿದ್ಯಾರ್ಥಿ. ಶಾಲಾ ಸಮವಸ್ತ್ರದಲ್ಲೇ ಈತ ವೈಯಕ್ತಿಕ ಕೆಲಸಕ್ಕೆಂದು ತನ್ನ ಸ್ನೇಹಿತ ಅಬ್ದುಲ್ ಜಾವಿದ್ ಖಾನ್(14) ನೊಂದಿಗೆ ಹೋಗಿದ್ದ. ಹೊನ್ನಶೆಟ್ಟರಹುಂಡಿಯಿಂದ ಮಡಹಳ್ಳಿ ಗ್ರಾಮದ ಕಡೆಗೆ ಸ್ಕೂಟರ್ನಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಮಡಹಳ್ಳಿ ಗ್ರಾಮದ ಯುವಕ ಚಲಾಯಿಸುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಹಿಂಬದಿ ಕುಳಿತಿದ್ದ ವಿದ್ಯಾರ್ಥಿ ಹಾಗೂ ಮತ್ತೊಂದು ಬೈಕಿನ ಇಬ್ಬರು ಸವಾರರಿಗೆ ಗಂಭೀರ ಗಾಯಗಳಾಗಿವೆ. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು: ಚಿನ್ನಾಭರಣ ದೋಚಲು ಪರಿಚಯಸ್ಥನಿಂದಲೇ ವೃದ್ಧ ದಂಪತಿ ಮೇಲೆ ಅಟ್ಯಾಕ್