ಚಾಮರಾಜನಗರ: ಖಾಸಗಿ ಶಾಲಾ ಶಿಕ್ಷಕರಿಗೆ ತರಕಾರಿ ಮಾರುವ ದುಸ್ಥಿತಿ ಬಂದಿದೆ. ಅನುಕೂಲವಿದ್ದವರು ಶುಲ್ಕ ಪಾವತಿಸಿದರೆ ಶಿಕ್ಷಕರಿಗೆ ವೇತನ ಕೊಡಲು ಸಹಾಯವಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನುಕೂಲದಲ್ಲಿರುವ ಪಾಲಕರು ಶುಲ್ಕ ಪಾವತಿಸಿದರೆ ಶಿಕ್ಷಕರಿಗೆ ವೇತನ ಕೊಡಲು ಸಹಕಾರಿಯಾಗಲಿದೆ. ಖಾಸಗಿ ಶಾಲೆಗಳೂ ಸರ್ಕಾರಿ ಶಾಲೆಗಳಷ್ಟೇ ಪ್ರಾಮುಖ್ಯತೆ ಪಡೆದಿವೆ. ಪಾಲಕರು ತಮ್ಮ ಮಕ್ಕಳನ್ನು ಕಷ್ಟಪಟ್ಟು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ. ಆರ್ಥಿಕವಾಗಿ ಅನುಕೂಲವಿರುವಂತಹ ಪೋಷಕರು ಶುಲ್ಕ ಪಾವತಿಸಬೇಕು ಎಂದು ಮನವಿ ಮಾಡಿಕೊಂಡರು.
ಕೆಲವು ಖಾಸಗಿ ಶಾಲೆಗಳು ಝೀರೋ ಬಡ್ಡಿದರದಲ್ಲಿ ಲೋನ್ ಕೊಡಿಸುವಂತೆ ಕೇಳಿವೆ. ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ಸಾಲ ಕೊಡಿಸಬಹುದಾ ಎಂದು ಚಿಂತನೆ ನಡೆಸಲಾಗುವುದು ಎಂದರು.