ETV Bharat / state

ಚಾಮರಾಜನಗರದಲ್ಲಿ 8 ಗಣಿ ಲೈಸನ್ಸ್ ರದ್ದು, ರಿಮೋಟ್‌ ಸೆನ್ಸ್ ಸ್ಕೀಂ ಜಾರಿ: ಸಚಿವ ಸೋಮಣ್ಣ

author img

By

Published : Mar 18, 2022, 10:01 PM IST

ಕೊಳ್ಳೇಗಾಲದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿದ್ದು, ಇನ್ನು ಮುಂದೆ ಮುಖ್ಯಮಂತ್ರಿಗಳ ವಿವೇಚನೆಗೆ ಬಾರದೆ ಯಾವುದೇ ಕ್ವಾರಿಗಳಿಗೆ ಅನುಮತಿ ನೀಡುವುದಿಲ್ಲ ಎಂದರು.

ಚಾಮರಾಜನಗರದಲ್ಲಿ 8 ಗಣಿ ಲೈಸೆನ್ಸ್ ರದ್ದು, ರಿಮೋಟ್ ಸೆನ್ಸ್ ಸ್ಕೀಂ ಜಾರಿ: ಸಚಿವ ಸೋಮಣ್ಣ

ಚಾಮರಾಜನಗರ: ಮಡಹಳ್ಳಿ ಕ್ವಾರಿಯಲ್ಲಿ ನಡೆದ ದುರಂತದ ನಂತರ 8 ಲೈಸನ್ಸ್ ಸ್ಥಗಿತಗೊಂಡಿದ್ದು ಯಾವುದೇ ಕಾರಣಕ್ಕೂ ಕೊಡಬೇಡಿ, ಸಿಎಂ ವಿವೇಚನೆಗೆ ಬಂದ ಬಳಿಕವೇ ಲೈಸನ್ಸ್‌ ಕೊಡಬೇಕು ಎಂದು ತಾಕೀತು ಮಾಡಿದ್ದೇನೆ ಎಂದು ಸಚಿವ ಸೋಮಣ್ಣ ಹೇಳಿದರು.

ಇದನ್ನೂ ಓದಿ: ಉಕ್ರೇನ್​ನಲ್ಲಿ ಹತನಾಗಿದ್ದ ನವೀನ್ ​: ಮೆಡಿಕಲ್ ಕಾಲೇಜಿಗೆ ಪಾರ್ಥೀವ ಶರೀರ ನೀಡಲು ಮುಂದಾದ ಕುಟುಂಬ

ಜಿಲ್ಲೆಯಲ್ಲಿ 163 ಕರಿಕಲ್ಲು, 68 ಬಿಳಿಕಲ್ಲು ಕ್ವಾರಿಗಳಿವೆ. ಸರ್ಕಾರದ ಭೂಮಿಯಲ್ಲಿ 18, ಪಟ್ಟಾ ಭೂಮಿಯಲ್ಲಿ 72 ಕ್ವಾರಿಗಳು ನಡೆಯುತ್ತಿವೆ. ಡಬ್ರೀಸ್ ಹಾಕುವುದಕ್ಕೆ ಪ್ರಮಾಣ ಪತ್ರ ಕೊಡಬೇಕು. ತಮಗೆ ಅನುಮತಿ ಇರುವ ಜಾಗಕ್ಕೆ ತಂತಿ ಬೇಲಿ ಹಾಕಬೇಕು. ಇದಕ್ಕೆಲ್ಲಾ ಎರಡು ತಿಂಗಳ ಅವಕಾಶ ಕೊಡಲಾಗಿದೆ ಎಂದು ಸೋಮಣ್ಣ ಹೇಳಿದರು.

ಅವೈಜ್ಞಾನಿಕವಾಗಿ ಪರ್ಮಿಟ್ ಅನ್ನು ಎಲ್ಲೋ ಕುಳಿತು ಕೊಡುತ್ತಿದ್ದರು. ವೇ ಬ್ರಿಡ್ಜ್‌ಗಳಿಲ್ಲ, ಎಲ್ಲಿ ವೇಬ್ರಿಡ್ಜ್ ಗಳಿಲ್ಲವೋ ಅಲ್ಲಿ ವೇ ಬ್ರಿಡ್ಜ್ ಹಾಕಬೇಕು. ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಮಾತ್ರ ಕ್ವಾರಿ ನಡೆಯಬೇಕು ಇತ್ಯಾದಿ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.